ಮಿತ್ತಬೈಲು : ಅಕ್ಟೋಬರ್ 16 ರಂದು (ನಾಳೆ) ಹಝ್ರತ್ ಶೈಖ್ ಗುಲಾಂ ಮುಹಮ್ಮದ್ ಅವರ 147ನೇ ಆಂಡ್ ನೇರ್ಚೆ - Karavali Times ಮಿತ್ತಬೈಲು : ಅಕ್ಟೋಬರ್ 16 ರಂದು (ನಾಳೆ) ಹಝ್ರತ್ ಶೈಖ್ ಗುಲಾಂ ಮುಹಮ್ಮದ್ ಅವರ 147ನೇ ಆಂಡ್ ನೇರ್ಚೆ - Karavali Times

728x90

15 October 2024

ಮಿತ್ತಬೈಲು : ಅಕ್ಟೋಬರ್ 16 ರಂದು (ನಾಳೆ) ಹಝ್ರತ್ ಶೈಖ್ ಗುಲಾಂ ಮುಹಮ್ಮದ್ ಅವರ 147ನೇ ಆಂಡ್ ನೇರ್ಚೆ

ಬಂಟ್ವಾಳ, ಅಕ್ಟೋಬರ್ 15, 2024 (ಕರಾವಳಿ ಟೈಮ್ಸ್) : ಉಸ್ತಾದುಲ್ ಅಸಾತೀದ್ ಮರ್ ಹೂಂ ಶೈಖುನಾ ಮಿತ್ತಬೈಲು ಉಸ್ತಾದರ ಮನೆಯಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಉಸ್ತಾದರ ತಾತ ಪಿತರಾದ ಹಝ್ರತ್ ಶೈಖ್ ಗುಲಾಂ ಮುಹಮ್ಮದ್ ಅಹ್ಮದ್ ಮೌಲಾ ಅನ್ನಕ್ಷಬಂಧೀ (ಖಸಿ) ಅವರ 147ನೇ ಆಂಡ್ ನೇರ್ಚೆ ಅಕ್ಟೋಬರ್ 16 ರಂದು ಬುಧವಾರ (ನಾಳೆ) ಉಸ್ತಾದ್ ಹೌಸ್ ಮಿತ್ತಬೈಲು ಇಲ್ಲಿ ನೆರವೇರಲಿದೆ. 

ಸುಬುಹಿ ನಮಾಝ್ ಬಳಿಕ ಮಿತ್ತಬೈಲು ಮುದರ್ರಿಸ್ ಉಮರ್ ಫಾರೂಕ್ ಫೈಝಿ ಪೈವಳಿಕೆ ಅವರ ನೇತೃತ್ವದಲ್ಲಿ ಕೂಟು ಝಿಯಾರತ್, ಬೆಳಿಗ್ಗೆ 6 ಗಂಟೆಗೆ ಮಿತ್ತಬೈಲು ಖತೀಬ್ ಅಬ್ಬಾಸ್ ಫೈಝಿ ಪುತ್ತಿಗೆ ಅವರ ನೇತೃತ್ವದಲ್ಲಿ ಖತ್ಮುಲ್ ಕುರ್-ಆನ್, ಬೆಳಿಗ್ಗೆ 10 ಗಂಟೆಗೆ ಅಬ್ದುಲ್ ನಾಸಿರ್ ಫೈಝಿ ಕಿಲ್ತಾನ್ ದ್ವೀಪ ಅವರ ನೇತೃತ್ವದಲ್ಲಿ ಹಖೀಖತ್ ಮಾಲಾ ಆಲಾಪಣೆ ನಡೆಯಲಿದೆ. 

ರಾತ್ರಿ ಇಶಾ ನಮಾಝ್ ಬಳಿಕ ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ ಹಾಗೂ ಅಬ್ಬಾಸ್ ಫೈಝಿ ಪುತ್ತಿಗೆ ಅವರ ನೇತೃತ್ವದಲ್ಲಿ ನಕ್ಷಬಂಧೀ ಮೌಲಿದ್ ಹಾಗೂ ದುವಾ ಮಜ್ಲಿಸ್ ನಡೆಯಲಿದೆ. ರಾತ್ರಿ 9 ಗಂಟೆಗೆ ತಬರ್ರುಕ್ ವಿತರಣೆ ನಡೆಯಲಿದೆ ಎಂದು ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಿತ್ತಬೈಲು : ಅಕ್ಟೋಬರ್ 16 ರಂದು (ನಾಳೆ) ಹಝ್ರತ್ ಶೈಖ್ ಗುಲಾಂ ಮುಹಮ್ಮದ್ ಅವರ 147ನೇ ಆಂಡ್ ನೇರ್ಚೆ Rating: 5 Reviewed By: karavali Times
Scroll to Top