ಬೆಂಗಳೂರು, ಅಕ್ಟೋಬರ್ 09, 2024 (ಕರಾವಳಿ ಟೈಮ್ಸ್) : ಅಲ್ಪಸಂಖ್ಯಾತ ವರ್ಗದ ಮೆಟ್ರಿಕ್ ನಂತರದ (ಪಿಯುಸಿ ಮೇಲ್ಪಟ್ಟು ಸ್ನಾತಕೋತ್ತರ ಪದವಿವರೆಗೆ) ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಾತಿಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಕೊನೆ ದಿನಾಂಕ ನವೆಂಬರ್ 11 ರವರೆಗೆ ವಿಸ್ತರಿಸಿ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಅಂತಿಮ ದಿನಾಂಕ ಅಕ್ಟೋಬರ್ 5 ಎಂದು ನಿಗದಿಪಡಿಸಲಾಗಿತ್ತು. ಇದೀಗ ವೃತ್ತಿಪರ ಕೋರ್ಸ್ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಕೌನ್ಸಿಲಿಂಗ್ ಹಾಗೂ ದಾಖಲಾತಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಅಂತಿಮ ದಿನಾಂಕ ವಿಸ್ತರಿಸಿ ಅಲ್ಪಸಂಖ್ಯಾತ ಇಲಾಖೆ ಆದೇಶ ಹೊರಡಿಸಿದೆ.
9 October 2024
- Blogger Comments
- Facebook Comments
Subscribe to:
Post Comments (Atom)
0 comments:
Post a Comment