ಬಂಟ್ವಾಳ, ಅಕ್ಟೋಬರ್ 04, 2024 (ಕರಾವಳಿ ಟೈಮ್ಸ್) : ಮೆಲ್ಕಾರ್ ಫ್ಲೈ ಓವರ್ ಕೆಳಗೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣ ಬೇಧಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ದ್ವಿಚಕ್ರ ವಾಹನ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬಂಟ್ವಾಳ ತಾಲೂಕು, ನಾವೂರು ಗ್ರಾಮದ ನಿವಾಸಿ ಅಬೂಬಕ್ಕರ್ ಸಿದ್ದೀಕ್ (40) ಎಂದು ಹೆಸರಿಸಲಾಗಿದೆ. ಸೆಪ್ಟೆಂಬರ್ 9 ರಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ
ಹೋಂಡಾ ಆಕ್ಟಿವಾ ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಪ್ರಗತಿಯಲ್ಲಿರಿಸಿ, ಅ 2 ರಂದು ಬಂಟ್ವಾಳ ನಗರ ಠಾಣಾ ಪಿಎಸ್ಸೈ ದುರ್ಗಪ್ಪ ಅವರ ನೇತೃತ್ವದ ಪೊಲೀಸರು ಬಿ ಸಿ ರೋಡಿನ ಫ್ಲೈ ಓವರ್ ಕೆಳಗೆ ವಾಹನ ತಪಾಸಣೆ ನಡೆಸುತ್ತಿದ್ದ ಬಿ ಸಿ ರೋಡು ಸರ್ಕಲ್ ಕಡೆಯಿಂದ ಬಂದ ವಾಹನ ನಿಲ್ಲಿಸಿ ವಿಚಾರಿಸಿದ್ದಾರೆ. ಆರೋಪಿ ಚಾಲಕ ಅಬೂಬಕ್ಕರ್ ಸಿದ್ದಿಕ್ ಪೊಲೀಸರಿಗೆ ಸಮರ್ಪಕ ಉತ್ತರ ನೀಡದೇ ಇದ್ದುದರಿಂದ, ಆತನನ್ನು ಬಂಟ್ವಾಳ ಡಿವೈಎಸ್ಪಿ ಅವರು ಸ್ವತ್ತು ಕಳವು ಪ್ರಕರಣಗಳ ಪತ್ತೆ ಬಗ್ಗೆ ರಚಿಸಿದ್ದ ತಂಡದ ಸಹಾಯದೊಂದಿಗೆ ಕೂಲಂಕುಶವಾಗಿ ವಿಚಾರಣೆ ನಡೆಸಿದಾಗ ಆರೋಪಿಯು ಸದ್ರಿ ದ್ವಿಚಕ್ರ ವಾಹನವನ್ನು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಫ್ಲೈಓವರ್ ಕೆಳಗಡೆಯಿಂದ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡ ಹಿನ್ನಲೆಯಲ್ಲಿ ಪೊಲೀಸರು ವಾಹನ ಸಹಿತವಾಗಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
0 comments:
Post a Comment