ಮಂಗಳೂರು, ನವೆಂಬರ್ 01, 2024 (ಕರಾವಳಿ ಟೈಮ್ಸ್) : ಕರ್ನಾಟ ಸರಕಾರ ಸುವರ್ಣ ಸಂಭ್ರಮದ ಹಿನ್ನಲೆಯಲ್ಲಿ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ ಜಿಲ್ಲಾ ಪ್ರಶಸ್ತಿಗೆ ಸಮಾಜ ಸೇವೆ ವಿಭಾಗದಲ್ಲಿ ಮಂಗಳೂರು ತಾಲೂಕು, ಕುಲಶೇಖರ-ರಚೆಲ್ ಮ್ಯಾನ್ಶನ್ ನಿವಾಸಿ ರೊನಾಲ್ಡ್ ಮಾರ್ಟಿಸ್ ಅವರು ಆಯ್ಕೆಯಾಗಿದ್ದಾರೆ.
ಪ್ರಚಾರವಿಲ್ಲದೆ ಕಳೆದ 2 ದಶಕಗಳಿಂದ ನಿರಂತರವಾಗಿ ಬಡವರ ಸೇವೆ ಮಾಡುತ್ತಿರುವ ರೊನಾಲ್ಡ್ ಮಾರ್ಟಿಸ್ ಕಳೆದ ಕೋವಿಡ್ ಸಮಯದಲ್ಲಿ ಆಶ್ರಮ, ಅನಾಥಾಶ್ರಮ ವಾಸಿಗಳಿಗೆ ಸಹಾಯ ಮಾಡಿದ್ದಲ್ಲದೆ ರಕ್ತದಾನ ಶಿಬಿರ, ಬಡ ಹೆಣ್ಣುಮಕ್ಕಳ ಮದುವೆ ಹಾಗೂ ಉಚಿತ ಮನೆ ನಿರ್ಮಾಣದ ಮೂಲಕ ಅವರ ಸೇವೆ ಸಲ್ಲಿಸಿ ಸೈ ಎನಿಸಿಕೊಂಡವರು. ಈ ಹಿನ್ನಲೆಯಲ್ಲಿ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರ ಈ ಬಾರಿಯ ರಾಜ್ಯೋತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ನೀಡಿ ಗೌರವಿಸಿದೆ.
0 comments:
Post a Comment