ಬೆಳ್ತಂಗಡಿ, ಅಕ್ಟೋಬರ್ 04, 2024 (ಕರಾವಳಿ ಟೈಮ್ಸ್) : ಎರಡು ಪಿಕಪ್ ವಾಹನಗಳಲ್ಲಿ ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿರುವ ಪ್ರಕರಣ ಬೇಧಿಸಿದ ಬೆಳ್ತಂಗಡಿ ಪೊಲೀಸರು ಜಾನುವಾರು ಸಹಿತ ನಾಲ್ವರು ಆರೋಪಿಗಳನ್ನು ದಸ್ತಗಿರಿ ಮಾಡಿದ ಘಟನೆ ಮಲವಂತಿಕೆ ಗ್ರಾಮದ ಕಜಕ್ಕೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕು, ಚಿಬಿದ್ರೆ ಗ್ರಾಮದ ನಿವಾಸಿಗಳಾದ ಯತೀಂದ್ರ (24), ಆರೀಫ್ (27), ಚಾರ್ಮಾಡಿ ಗ್ರಾಮದ ನಿವಾಸಿ ಉಸ್ಮಾನ್ (36), ತೊಟತ್ತಾಡಿ ಗ್ರಾಮದ ನಿವಾಸಿ ಅರವಿಂದ (30) ಎಂದು ಗುರುತಿಸಲಾಗಿದೆ.
ಜಾನುವಾರು ಸಾಗಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಬೆಳ್ತಂಗಡಿ ಪಿಎಸ್ಸೈ ಮುರಳೀಧರ ನಾಯ್ಕ ಕೆ ಜಿ ನೇತೃತ್ವದ ಪೆÇಲೀಸರು ಬೆಳ್ತಂಗಡಿ ತಾಲೂಕು ಮಲವಂತಿಕೆ ಗ್ರಾಮದ ಕಜಕ್ಕೆ ಎಂಬಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ.
ಪೊಲೀಸರ ಕಾರ್ಯಾಚರಣೆ ವೇಳೆ ಕೆಎ 70 5197 ನೋಂದಣಿ ಸಂಖ್ಯೆಯ ಪಿಕಪ್ ವಾಹನದಲ್ಲಿ 3 ಜಾನುವಾರು ಹಾಗೂ ಕೆಎ18 ಬಿ4918 ನೋಂದಣಿ ಸಂಖ್ಯೆಯ ಪಿಕಪ್ ವಾಹನದಲ್ಲಿ 2 ಜಾನುವಾರುಗಳು ಪತ್ತೆಯಾಗಿದೆ. ವಾಹನ, ಜಾನುವಾರು ಸಹಿತ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 84/2024 ಕಲಂ 5, 7, 12 ಕರ್ನಾಟಕ ಜಾನುವಾರು ಪ್ರತಿಬಂಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಆದ್ಯಾಧೇಶ 2020 ಮತ್ತು ಕಲಂ 11(ಡಿ) ಪ್ರಾಣಿ ಹಿಂಸೆ ತಡೆಕಾಯಿದೆ 1960 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment