ಬಾಂಬಿಲ : ಕಾರು ರಸ್ತೆ ಬದಿಯ ಗುಂಡಿಗೆ ಉರುಳಿ ಬಿದ್ದು ಮಹಿಳೆ ಮೃತ್ಯು, ಇಬ್ಬರಿಗೆ ಗಾಯ, ಗಾಯಗಳಿಲ್ಲದೆ ಪಾರಾದ 3 ರ ಬಾಲೆ - Karavali Times ಬಾಂಬಿಲ : ಕಾರು ರಸ್ತೆ ಬದಿಯ ಗುಂಡಿಗೆ ಉರುಳಿ ಬಿದ್ದು ಮಹಿಳೆ ಮೃತ್ಯು, ಇಬ್ಬರಿಗೆ ಗಾಯ, ಗಾಯಗಳಿಲ್ಲದೆ ಪಾರಾದ 3 ರ ಬಾಲೆ - Karavali Times

728x90

14 October 2024

ಬಾಂಬಿಲ : ಕಾರು ರಸ್ತೆ ಬದಿಯ ಗುಂಡಿಗೆ ಉರುಳಿ ಬಿದ್ದು ಮಹಿಳೆ ಮೃತ್ಯು, ಇಬ್ಬರಿಗೆ ಗಾಯ, ಗಾಯಗಳಿಲ್ಲದೆ ಪಾರಾದ 3 ರ ಬಾಲೆ

ಬಂಟ್ವಾಳ, ಅಕ್ಟೋಬರ್ 14, 2024 (ಕರಾವಳಿ ಟೈಮ್ಸ್) : ಚಾಲಕನ ನಿಯಂತ್ರಣ ಮೀರಿದ ಕಾರೊಂದು ಹೆದ್ದಾರಿ ಬದಿಯ ಗುಂಡಿಗೆ ಮಗುಚಿ ಬಿದ್ದು ಮಹಿಳೆ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ಸೋಮವಾರ ಬೆಳಗ್ಗಿನ ಜಾವ ಸಂಭವಿಸಿದೆ. 

ಮೃತ ಮಹಿಳೆಯನ್ನು ಮಂಗಳೂರು ನಿವಾಸಿ ಭಾಗೀರಥಿ (62) ಎಂದು ಹೆಸರಿಸಲಾಗಿದ್ದು, ಗಾಯಾಳುಗಳನ್ನು ಮಗ, ಕಾರು ಚಾಲಕ ರೂಪೇಶ್ (29) ಹಾಗೂ ಸೊಸೆ ಸುಚಿತ್ರಾ (32) ಎಂದು ಹೆಸರಿಸಲಾಗಿದೆ. ಅಪಘಾತದಲ್ಲಿ 3 ವರ್ಷದ ಮಗು ಧನ್ವಿಶ್ ಯಾವುದೇ ಗಾಯಗಳಿಲ್ಲದೆ ಪಾರಾಗಿದೆ. 

ಈ ಬಗ್ಗೆ ಕುಂದಾಪುರ ನಿವಾಸಿ ಅಜಿತ್ (31) ಅವರು ಪೊಲೀಸರಿಗೆ ದೂರು ನೀಡಿದ್ದು, ಸೋಮವಾರ ಬೆಳಗಿನ ಜಾವ ಅಜಿತ್ ಅವರ ಸಂಬಂಧಿಕರಾದ ರೂಪೇಶ್ (29) ಅವರು ಚಾಲಕರಾಗಿ ತಾಯಿ ಭಾಗೀರಥಿ (62), ಪತ್ನಿ ಸುಚಿತ್ರ (32), ಹಾಗೂ ಮಗು ಧನ್ವಿಶ್ (3) ಅವರೊಂದಿಗೆ ಕಾರಿನಲ್ಲಿ ತುಮಕೂರಿನಿಂದ ಮಂಗಳೂರಿಗೆ ಪ್ರಯಾಣಿಸುತ್ತಾ, ಕಡೂರು-ಬಿ ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುತ್ತಾ ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿಗೆ ತಲುಪಿದಾಗ, ಕಾರಿನ ಚಾಲಕ ರೂಪೇಶ ಅವರು ನಿದ್ದೆ ಮಂಪರಿನಲ್ಲಿ ಕಾರು ನಿಯಂತ್ರಣ ಮೀರಿ ರಸ್ತೆಯ ಎಡಬದಿಯಲ್ಲಿರುವ ಗುಂಡಿಗೆ ಮಗುಚಿ ಬಿದ್ದು ಅಪಘಾತವಾಗಿರುತ್ತದೆ. ಅಪಘಾತದಿಂದ ಸುಚಿತ್ರ, ಕಾರು ಚಾಲಕ ರೂಪೇಶ ಹಾಗೂ ಭಾಗೀರಥಿ ಅವರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಗಾಯಾಳುಗಳ ಪೈಕಿ ಭಾಗೀರಥಿ ಅವರು ದಾರಿ ಮಧ್ಯೆ ಮೃತಪಟ್ಟಿರುತ್ತಾರೆ. ಧನ್ವಿಶ್(3) ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಾಂಬಿಲ : ಕಾರು ರಸ್ತೆ ಬದಿಯ ಗುಂಡಿಗೆ ಉರುಳಿ ಬಿದ್ದು ಮಹಿಳೆ ಮೃತ್ಯು, ಇಬ್ಬರಿಗೆ ಗಾಯ, ಗಾಯಗಳಿಲ್ಲದೆ ಪಾರಾದ 3 ರ ಬಾಲೆ Rating: 5 Reviewed By: karavali Times
Scroll to Top