ಬಂಟ್ವಾಳ, ಅಕ್ಟೋಬರ್ 10, 2024 (ಕರಾವಳಿ ಟೈಮ್ಸ್) : ನವರಾತ್ರಿ ಉತ್ಸವದ ಅಂಗವಾಗಿ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ಬುಧವಾರ ಆಯುಧ ಪೂಜಾ ಕಾರ್ಯಕ್ರಮ ನಡೆಯಿತು. ಅರ್ಚಕ ರಾಘವೇಂದ್ರ ಮಯ್ಯರಬೈಲು ಹಾಗೂ ಸಹಾಯಕ ಅರ್ಚಕರು ಪೂಜಾ ವಿಧಿ-ವಿಧಾನ ನೆರವೇರಿಸಿದರು.
ಪೂಜಾ ಕಾರ್ಯಕ್ರಮದಲ್ಲಿ ಬಂಟ್ವಾಳ ತಹಶೀಲ್ದಾರ್ ಡಿ ಅರ್ಚನಾ ಭಟ್ ಭಾಗವಹಿಸಿ, ಆರೋಗ್ಯ, ಸಂಪತ್ತು, ನೆಮ್ಮದಿಗಳ ಜೊತೆ ಎಲ್ಲಾ ಪರಿಸ್ಥಿತಿಗಳನ್ನೂ ಎದುರಿಸಲು ಶಕ್ತಿ ಬೇಕು. ದುರ್ಗಾ ದೇವಿಯು ಎಲ್ಲರಿಗೂ ಇಂತಹ ಶಕ್ತಿಯನ್ನು ಕರುಣಿಸಲಿ ಎಂದು ಶುಭ ಹಾರೈಸಿ, ಸರ್ವರಿಗೂ ನವರಾತ್ರಿ ಹಬ್ಬದ ಶುಭಾಶಯ ಕೋರಿದರು.
ಉಪತಹಶೀಲ್ದಾರ್ ಗಳಾದ ನರೇಂದ್ರನಾಥ್ ಮಿತ್ತೂರು, ರಾಜೇಶ್ ನಾಯ್ಕ್, ನವೀನ್ ಬೆಂಜನಪದವು, ವಿಜಯ ವಿಕ್ರಮ್, ದಿವಾಕರ ಮುಗಳಿಯ, ಕಂದಾಯ ನಿರೀಕ್ಷಕರಾದ ಜನಾರ್ದನ ಜೆ, ವಿಜಯ್ ಆರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್, ತಾಲೂಕು ಕಚೇರಿ ಸಿಬ್ಬಂದಿಗಳು, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಸಹಾಯಕರು, ಸಾರ್ವಜನಿಕರು ಭಾಗವಹಿಸಿದ್ದರು.
0 comments:
Post a Comment