ಬಂಟ್ವಾಳ, ಅಕ್ಟೋಬರ್ 06, 2024 (ಕರಾವಳಿ ಟೈಮ್ಸ್) : ತೀವ್ರ ಜ್ವರ ಬಾಧಿಸಿ ಚಿಕಿತ್ಸೆ ಫಲಕಾರಿಯಾಗದೆ ಯುವ ಧಾರ್ಮಿಕ ಗುರು, ಮುಡಿಪು ಸಮೀಪದ ಇರಾ ಗ್ರಾಮದ ದರ್ಖಾಸು ನಿವಾಸಿ ಆರಿಫ್ ಹನೀಫಿ ಅಲ್ ಅಶ್-ಅರೀ (25) ಅವರು ಭಾನುವಾರ ಮುಂಜಾನೆ ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪಾಣೆಮಂಗಳೂರು-ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಶೈಖುನಾ ಬಿ ಎಚ್ ಉಸ್ತಾದ್ ಅವರ ಬಳಿ ಕೆಲವು ವರ್ಷಗಳ ಕಾಲ ದರ್ಸ್ ವಿದ್ಯಾಭ್ಯಾಸ ಪಡೆದು ಬಳಿಕ ಸುರಿಬೈಲು ದಾರುಲ್ ಅಶ್-ಅರಿಯ್ಯ ಸಂಸ್ಥೆಯಲ್ಲಿ ಹನೀಫಿ ಸನದು ಪಡೆದಿದ್ದರು. ಪ್ರಸ್ತುತ ಬೈಕಂಪಾಡಿ ಸಮೀಪದ ಅಂಗರಗುಂಡಿ ಮಸೀದಿಯಲ್ಲಿ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದ ಅವರಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಜ್ವರ ಬಾಧಿಸಿದ ಹಿನ್ನಲೆಯಲ್ಲಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಮುಂಜಾನೆ ನಿಧನರಾಗಿದ್ದಾರೆ.
ಅವಿವಾಹಿತರಾಗಿರುವ ಮೃತರು ತಾಯಿ, ಸಹೋದರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ದಫನ ಕ್ರಿಯೆ ಭಾನುವಾರ ಮಧ್ಯಾಹ್ನದ ವೇಳೆಗೆ ಇರಾ ಮಸೀದಿಯಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ.
0 comments:
Post a Comment