ಬೆಳ್ತಂಗಡಿ, ಅಕ್ಟೋಬರ್ 30, 2024 (ಕರಾವಳಿ ಟೈಮ್ಸ್) : ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳರು ಎಟಿಎಂ ಯಂತ್ರದ ಸೇಫ್ ಡೋರಿನ ಲಾಕ್ ಮುರಿದು ಅಲ್ಲಲ್ಲಿ ಜಖಂಗೊಳಿಸಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಬಾರ್ಯ ಗ್ರಾಮದ ಮೂರುಗೋಳಿ ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಕಲೆಂಜಿಬೈಲು ಪುತ್ತಿಲ ನಿವಾಸಿ ಮಹಮ್ಮದ್ ಹರ್ಷದ್ ಪಿ ಕೆ (27) ಅವರು ಬಾರ್ಯ ಗ್ರಾಮದ ಮೂರುಗೋಳಿ ಎಂಬಲ್ಲಿ ಸೈಬರ್ ಕೇಂದ್ರವನ್ನು ಹೊಂದಿದ್ದು, ಜೊತೆಗೆ ವಕ್ರಾಂಗೀ ಸಂಸ್ಥೆಗೆ ಸಂಬಂಧಿಸಿದ ಎ.ಟಿ.ಎಂ ಕೇಂದ್ರವನ್ನು ನಿರ್ವಹಿಸಿಕೊಂಡು ಬರುತ್ತಿರುವುದಾಗಿದೆ. ಅ 28 ರಂದು ರಾತ್ರಿವರೆಗೆ ಸೈಬರ್ ಕೇಂದ್ರದಲ್ಲಿದ್ದ ಹರ್ಷದ್ ಅವರು ಬಳಿಕ ಬಂದ್ ಮಾಡಿ ಮನೆಗೆ ತೆರಳಿದ್ದರು. ಅ 29 ರಂದು ಬೆಳಿಗ್ಗೆ ಪರಿಚಯದವರು ಕರೆ ಮಾಡಿ, ಎ.ಟಿ.ಎಂ ಕೇಂದ್ರಕ್ಕೆ ರಾತ್ರಿ ವೇಳೆ ಕಳ್ಳರು ನುಗ್ಗಿರುವುದಾಗಿ ತಿಳಿಸಿದ್ದು, ಅದರಂತೆ ಹರ್ಷದ್ ಅವರು ಬಂದು ಪರಿಶೀಲಿಸಿದಾಗ ಎಟಿಎಂ ಕೇಂದ್ರದ ಒಳಗಿನ ಎಟಿಎಂ ಮೆಷಿನಿನ ಸೇಫ್ ಡೋರಿನ ಲಾಕ್ ಮುರಿದು ಅಲ್ಲಲ್ಲಿ ಜಖಂಗೊಳಿಸಿ ಕಳವಿಗೆ ಪ್ರಯತ್ನಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment