ಬಂಟ್ವಾಳ, ಅಕ್ಟೋಬರ್ 31, 2024 (ಕರಾವಳಿ ಟೈಮ್ಸ್) : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಧಾರಾವಿ ಕ್ಷೇತ್ರದಿಂದ ಮಹಾ ವಿಕಾಸ್ ಅಘಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀಮತಿ ಜ್ಯೋತಿ ಏಕನಾಥ ಗೈಕ್ವಾಡ್ ಅವರೊಂದಿಗೆ ಧಾರಾವಿ ಚುನಾವಣಾ ಕಚೇರಿಯಲ್ಲಿ ಮಾಜಿ ಸಚಿವ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಎಐಸಿಸಿ ವೀಕ್ಷಕ ಬಿ ರಮಾನಾಥ ರೈ ಅವರು ಚುನಾವಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಛೇರಿಯ ತಿಲಕ ಭವನದಲ್ಲಿ ನಡೆದ ವಿಧಾನಸಭಾ ಪ್ರಮುಖರ ಸಭೆಯಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿಗಳು, ಎಐಸಿಸಿ ಪ್ರಮುಖ ಉಸ್ತುವಾರಿಗಳಾದ ಅಶೋಕ್ ಗೆಹ್ಲೋಟ್ ಹಾಗೂ ಕರ್ನಾಟಕದ ಗೃಹಮಂತ್ರಿಗಳು, ಎಐಸಿಸಿ ಪ್ರಮುಖರಾದ ಡಾ ಜಿ ಪರಮೇಶ್ವರ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಅವಿನಾಶ್ ಪಾಂಡೆ ಅವರೊಂದಿಗೆ ಉನ್ನತ ಮಟ್ಟದ ಸಭೆಯಲ್ಲಿ ಕರ್ನಾಟಕದ ಮಾಜಿ ಸಚಿವ, ಮಹಾರಾಷ್ಟ್ರ ಚುನಾವಣೆಯ ಉಸ್ತುವಾರಿ ಬಿ ರಮಾನಾಥ ರೈ ಅವರು ಭಾಗವಹಿಸಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸಾಯನ್ ಕೊಳಿ ವಾಡಾ ಕ್ಷೇತ್ರದಿಂದ ಮಹಾ ವಿಕಾಸ್ ಅಘಾಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಣೇಶ್ ಯಾದವ್ ಅವರೊಂದಿಗೆ ಜಿಟಿಬಿ ನಗರದಲ್ಲಿರುವ ಚುನಾವಣಾ ಕಚೇರಿಯಲ್ಲಿ ಚುನಾವಣೆಯಲ್ಲಿ ಗೆಲುವಿನ ಕಾರ್ಯತಂತ್ರದ ಬಗ್ಗೆ ಚರ್ಚೆಯಲ್ಲಿ ಮಾಜಿ ಸಚಿವ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಉಸ್ತುವಾರಿ ಬಿ ರಮಾನಾಥ ರೈ ಅವರು ಭಾಗವಹಿಸಿದರು.
ಈ ಸಂದರ್ಭ ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಶಬೀರ್ ಎಸ್ ಮೊದಲಾದವರು ಜೊತೆಗಿದ್ದರು.
0 comments:
Post a Comment