ಬೆಳ್ತಂಗಡಿ, ಸೆಪ್ಟೆಂಬರ್ 01, 2024 (ಕರಾವಳಿ ಟೈಮ್ಸ್) : ಸಾವಿರಾರು ಮೌಲ್ಯದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಸೆನ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ ಘಟನೆ ಕುವೆಟ್ಟು ಗ್ರಾಮದ ಸಬರಬೈಲು ಬಸ್ ನಿಲ್ದಾಣದ ಬಳಿ ಶನಿವಾರ ರಾತ್ರಿ ನಡೆದಿದೆ.
ಬಂಧಿತ ಆರೋಪಿಯನ್ನು ಸ್ಥಳೀಯ ನಿವಾಸಿ ಮಹಮ್ಮದ್ ರಫೀಕ್ (37) ಎಂದು ಹೆಸರಿಸಲಾಗಿದೆ. ಶನಿವಾರ ರಾತ್ರಿ ಕುವೆಟ್ಟು ಗ್ರಾಮದ, ಸಬರಬೈಲು ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿಯೋರ್ವ ಅಕ್ರಮವಾಗಿ ಮಾದಕ ವಸ್ತುವಾದ ಗಾಂಜಾವನ್ನು ವಶದಲ್ಲಿಟ್ಟುಕೊಂಡು ಮಾರಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಸೆನ್ ಅಪರಾಧ ಪೊಲೀಸ್ ಠಾಣಾ ಪಿಎಸ್ಸೈ ಮಂಜುನಾಥ್ ಟಿ ನೇತೃತ್ವದ ಪೊಲೀಸರು ಸ್ಥಳಕ್ಕೆ ತೆರಳಿದ ವೇಳೆ ಸ್ಥಳದಲ್ಲಿ ಆರೋಪಿ ರಫೀಕ್ ಅನುಮಾನಾಸ್ಪದವಾಗಿ ನಿಂತುಕೊಂಡಿದ್ದು, ಆತನನ್ನು ತಡೆದು ಪರಿಶೀಲನೆ ನಡೆಸಿದಾಗ ಗಾಂಜಾ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ಬಳಿ ಸುಮಾರು 20 ಸಾವಿರ ರೂಪಾಯಿ ಮೌಲ್ಯದ 1,150 ಗ್ರಾಂ ಮಾದಕ ವಸ್ತುವಾದ ಗಾಂಜಾ ಪತ್ತೆಯಾಗಿದೆ. ಹೆಚ್ಚಿನ ಹಣ ಸಂಪಾದನೆಗಾಗಿ ಮಾರಾಟ ಮಾಡಲು ಕೇರಳ ರಾಜ್ಯದಿಂದ ಈ ಗಾಂಜಾ ತಂದಿರುವುದಾಗಿ ಆರೋಪಿ ತಿಳಿಸಿದ್ದು, ಈತನ ಬಳಿಯಲ್ಲಿದ್ದ ಗಾಂಜಾ ಸಹಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 43/2024 ಕಲಂ 8(ಸಿ) 20(ಬಿ)(111)(ಬಿ) ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment