ಅಷ್ಠಮಿ, ಚೌತಿ ಸೌಹಾರ್ದಯುತವಾಗಿ ನೆರವೇರಿದ ಕೆಲವೇ ದಿನಗಳ ಅಂತರದಲ್ಲಿ ಮಿಲಾದ್ ಆಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಬಿಸಿಯೇರಿದ ಬಿ.ಸಿ.ರೋಡು : ಸವಾಲು-ಪ್ರತಿ ಸವಾಲಿಗೆ ನಲುಗಿ ಆತಂಕದ ಪರಿಸ್ಥಿತಿ ನಿರ್ಮಾಣ, ಪೊಲೀಸರಿಂದ ಬಿಗು ಬಂದೋಬಸ್ತ್ - Karavali Times ಅಷ್ಠಮಿ, ಚೌತಿ ಸೌಹಾರ್ದಯುತವಾಗಿ ನೆರವೇರಿದ ಕೆಲವೇ ದಿನಗಳ ಅಂತರದಲ್ಲಿ ಮಿಲಾದ್ ಆಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಬಿಸಿಯೇರಿದ ಬಿ.ಸಿ.ರೋಡು : ಸವಾಲು-ಪ್ರತಿ ಸವಾಲಿಗೆ ನಲುಗಿ ಆತಂಕದ ಪರಿಸ್ಥಿತಿ ನಿರ್ಮಾಣ, ಪೊಲೀಸರಿಂದ ಬಿಗು ಬಂದೋಬಸ್ತ್ - Karavali Times

728x90

16 September 2024

ಅಷ್ಠಮಿ, ಚೌತಿ ಸೌಹಾರ್ದಯುತವಾಗಿ ನೆರವೇರಿದ ಕೆಲವೇ ದಿನಗಳ ಅಂತರದಲ್ಲಿ ಮಿಲಾದ್ ಆಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಬಿಸಿಯೇರಿದ ಬಿ.ಸಿ.ರೋಡು : ಸವಾಲು-ಪ್ರತಿ ಸವಾಲಿಗೆ ನಲುಗಿ ಆತಂಕದ ಪರಿಸ್ಥಿತಿ ನಿರ್ಮಾಣ, ಪೊಲೀಸರಿಂದ ಬಿಗು ಬಂದೋಬಸ್ತ್

ಬಂಟ್ವಾಳ, ಸೆಪ್ಟೆಂಬರ್ 16, 2024 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಹಿಂದುಗಳ ಪವಿತ್ರ ಧಾರ್ಮಿಕ ಆಚರಣೆಗಳಾದ ನಾಗರ ಪಂಚಮಿ, ಕೃಷ್ಣ ಜನ್ಮಾಷ್ಠಮಿ ಹಾಗೂ ಶ್ರೀ ಗಣೇಶ ಚತುರ್ಥಿ ಹಬ್ಬಗಳು ಸಾಂಗವಾಗಿ, ಶಾಂತಿಯುತವಾಗಿ ಹಾಗೂ ಸಂಭ್ರಮದಿಂದ ಆಚರಣೆಗೊಂಡು ಮುಕ್ತಾಯಗೊಂಡಿದ್ದು, ಅದರಲ್ಲೂ ಈ ಬಾರಿ ಹಿಂದುಗಳ ಹಬ್ಬಕ್ಕೆ ಬಿ ಸಿ ರೋಡಿನ ಮಿತ್ತಬೈಲು ಸಹಿತ ಬಹುತೇಕ ಕಡೆ ಮುಸಲ್ಮಾನ ಬಂಧುಗಳು ಸಹಿತಿಂಡಿ, ಪಾನಕಗಳನ್ನು ಹಂಚಿ ಸೌಹಾರ್ದತೆಯನ್ನೂ ಮೆರೆದು ಕೋಮುಸೂಕ್ಷ್ಮ ಪ್ರದೇಶವಾಗಿರುವ ಬಂಟ್ವಾಳದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣಗೊಂಡಿತ್ತು. 

ಆದರೆ ಇದೀಗ ಕೆಲವೇ ದಿನಗಳ ಅಂತರದಲ್ಲಿ ಬಂದ ಮುಸ್ಲಿಮರ ಧಾರ್ಮಿಕ ಆಚರಣೆಯಾಗಿರುವ ಮಿಲಾದುನ್ನಬೀ ಆಚರಣೆ ಹೊತ್ತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಉಂಟಾದ ಕೆಲ ಸವಾಲು-ಪ್ರತಿ ಸವಾಲು ಘಟನೆಗಳಿಂದಾಗಿ ಶಾಂತವಾಗಿದ್ದ ಬಂಟ್ವಾಳದಲ್ಲಿ ಹಠಾತ್ ಆಗಿ ಒಂದು ರೀತಿಯ ಆತಂಕ-ಉದ್ವಿಗ್ನತೆಯ ಪರಿಸ್ಥಿತಿ ತಲೆದೋರಿದೆ. ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಹಿಂದೂ ಪ್ರಮುಖ ಶರಣ್ ಪಂಪ್ ವೆಲ್ ಅವರು ನೀಡಿರುವ ಹೇಳಿಕೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಬಂಟ್ವಾಳ ಪುರಸಭಾ ಸದಸ್ಯರುಗಳಿಬ್ಬರು ಸಾಮಾಜಿ ಜಾಲ ತಾಣಗಳಲ್ಲಿ ಸವಾಲಿನ ಧ್ವನಿ ಸಂದೇಶವನ್ನು ಭಾನುವಾರ ರವಾನಿಸಿದ್ದರು. ಇವರ ಸವಾಲನ್ನು ಸ್ವೀಕರಿಸಿದ ಹಿಂದೂ ಸಂಘಟನೆಗಳು ಸೋಮವಾರ ಬೆಳಿಗ್ಗೆಯೇ ತಮ್ಮ ಕಾರ್ಯಕರ್ತರನ್ನು ಬಿ ಸಿ ರೋಡು ಜಂಕ್ಷನ್ನಿನಲ್ಲಿ ಜಮಾಯಿಸಿದ್ದಾರೆ. ಬಳಿಕ ಶರಣ್ ಪಂಪ್ ವೆಲ್ ಹಾಗೂ ಪುನೀತ್ ಅತ್ತಾವರ ಅವರು ಆಗಮಿಸಿ ಪೊಲೀಸರ ನಿರ್ಬಂಧದ ನಡುವೆಯೂ ಸೇರಿದ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. 

ಈ ಸಂದರ್ಭ ಸ್ಥಳದಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ಒಂದಷ್ಟು ನೂಕಾಟ-ತಳ್ಳಾಟ ನಡೆದಿದ್ದು, ಬಳಿಕ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಯಿತು. ಐಜಿಪಿ, ಎಸ್ಪಿ ಸಹಿತ ಹಿರಿಯ ಪೊಲೀಸ್ ಅಧಿಕಾರಿಗಳು, ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಬಂಟ್ವಾಳ ತಹಶೀಲ್ದಾರರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಂಡರಲ್ಲದೆ ಮುಸ್ಲಿಮರ ಮಿಲಾದ್ ರ್ಯಾಲಿ ಹಾಗೂ ಹಿಂದೂ ಸಂಘಟನೆಗಳ ಪ್ರತಿಭಟನೆ ಎರಡನ್ನೂ ಏಕಕಾಲದಲ್ಲಿ ನಡೆಸಲು ಅವಕಾಶ ಮಾಡಿಕೊಟ್ಟು ಪರಿಸ್ಥಿತಿ ನಿಯಂತ್ರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಷ್ಠಮಿ, ಚೌತಿ ಸೌಹಾರ್ದಯುತವಾಗಿ ನೆರವೇರಿದ ಕೆಲವೇ ದಿನಗಳ ಅಂತರದಲ್ಲಿ ಮಿಲಾದ್ ಆಚರಣೆ ವೇಳೆ ಕ್ಷುಲ್ಲಕ ಕಾರಣಕ್ಕೆ ಬಿಸಿಯೇರಿದ ಬಿ.ಸಿ.ರೋಡು : ಸವಾಲು-ಪ್ರತಿ ಸವಾಲಿಗೆ ನಲುಗಿ ಆತಂಕದ ಪರಿಸ್ಥಿತಿ ನಿರ್ಮಾಣ, ಪೊಲೀಸರಿಂದ ಬಿಗು ಬಂದೋಬಸ್ತ್ Rating: 5 Reviewed By: karavali Times
Scroll to Top