ಬೆಳ್ತಂಗಡಿ, ಸೆಪ್ಟೆಂಬರ್ 23, 2024 (ಕರಾವಳಿ ಟೈಮ್ಸ್) : ಗುರುವಾಯನಕೆರೆ ಅಂಗಡಿ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಕಾಣೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಿಮಣೇಲು ಗ್ರಾಮದ ವೇಣೂರು ನಿವಾಸಿ ಸಂತೋಷ್ ಕುಮಾರ್ (53) ಅವರು ಶುಕ್ರವಾರ ಮಧ್ಯಾಹ್ನ ತನ್ನ ನೋಂದಣಿ ಸಂಖ್ಯೆ ಕೆಎ 19 ಎಚ್ ಎಂ 3013 ಯ ಬೈಕನ್ನು ಕುವೆಟ್ಟು ಗ್ರಾಮದ ಗುರುವಾಯನಕೆರೆ ಎಂಬಲ್ಲಿರುವ ಶ್ರೇಷ್ಠ ಪೀಠೋಪಕರಣ ಅಂಗಡಿಯ ಪಕ್ಕದಲ್ಲಿ ನಿಲ್ಲಿಸಿ ಹೋಗಿದ್ದು, ಸಂಜೆ ವಾಪಾಸು ಬಂದು ನೋಡಿದಾಗ ಬೈಕ್ ಕಾಣೆಯಾಗಿದೆ. ಕಳವಾಗಿರುವ ಬೈಕಿನ ಮೌಲ್ಯ 68 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment