ಸೆ 20 ರಿಂದ 24ರವರೆಗೆ ಬಂಟ್ವಾಳ ವರ್ತಕರ ಸಹಕಾರಿ ಸಂಘದ ‘ವಿಂಶತಿ ಸಂಭ್ರಮ, ವರ್ತಕ-ಗ್ರಾಹಕ ಸಮಾಗಮ, ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ತಿಂಡಿ-ತಿನಿಸುಗಳ ಮಹಾಮೇಳ - Karavali Times ಸೆ 20 ರಿಂದ 24ರವರೆಗೆ ಬಂಟ್ವಾಳ ವರ್ತಕರ ಸಹಕಾರಿ ಸಂಘದ ‘ವಿಂಶತಿ ಸಂಭ್ರಮ, ವರ್ತಕ-ಗ್ರಾಹಕ ಸಮಾಗಮ, ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ತಿಂಡಿ-ತಿನಿಸುಗಳ ಮಹಾಮೇಳ - Karavali Times

728x90

17 September 2024

ಸೆ 20 ರಿಂದ 24ರವರೆಗೆ ಬಂಟ್ವಾಳ ವರ್ತಕರ ಸಹಕಾರಿ ಸಂಘದ ‘ವಿಂಶತಿ ಸಂಭ್ರಮ, ವರ್ತಕ-ಗ್ರಾಹಕ ಸಮಾಗಮ, ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ತಿಂಡಿ-ತಿನಿಸುಗಳ ಮಹಾಮೇಳ

ಬಂಟ್ವಾಳ, ಸೆಪ್ಟೆಂಬರ್ 17, 2024 (ಕರಾವಳಿ ಟೈಮ್ಸ್) : ಬಂಟ್ವಾಳವನ್ನು ಕೇಂದ್ರೀಕರಿಸಿರುವ ದಕ್ಷಿಣ ಕನ್ನಡ ವರ್ತಕರ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಪ್ರಸ್ತುತ 20 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಂಯೋಜನೆಯಲ್ಲಿ “ವಿಂಶತಿ ಸಂಭ್ರಮ 2023-24, ವರ್ತಕರ-ಗ್ರಾಹಕರ ಮಹಾಸಂಗಮ”, ಗೃಹೊಪಯೋಗಿ ವಸ್ತುಗಳ ಮಾರಾಟ ಹಾಗೂ ತಿಂಡಿ-ತಿನಿÀಸುಗಳ ಮಹಾಮೇಳ, ಆರೋಗ್ಯ ತಪಾಸಣೆ, ದಿವ್ಯಾಂಗರ ಸಮಸ್ಯೆಗಳ ಜಾಗೃತಿ ಕಾರ್ಯಕ್ರಮವು ಸೆಪ್ಟೆಂಬರ್ 20 ರಿಂದ 22 ರವರೆಗೆ ಬಿ ಸಿ ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್  ತಿಳಿಸಿದರು. 

ಮಂಗಳವಾರ ಸಂಜೆ ಕಲಾ ಮಂದಿರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಜಂಟಿ ಕಾರ್ಯಕ್ರಮಗಳನ್ನು ಸೆ 20 ರಂದು ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಉದ್ಘಾಟಿಸುವರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಅಧ್ಯಕ್ಷ ರೋ ಕಿಶೋರ್ ಕುಮಾರ್ ಅಧ್ಯಕ್ಷತೆ ವಹಿಸುವರು. ವರ್ತಕರ ಸಂಘದ ಬಂಟ್ವಾಳ ಇದರ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಉಪಸ್ಥಿತರಿರುವರು. ಬಂಟ್ವಾಳ ಪುರಸಭಾ ಸದಸ್ಯ ಹರಿಪ್ರಸಾದ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬಿ ಸಿ ರೋಡಿನ ವಿಕಾಸಂ ಸೇವಾ ಫೌಂಡೇಶನ್ ನಿರ್ದೇಶಕ ಗಣೇಶ್ ಭಟ್ ವಾರಣಾಸಿ ಅವರು ದಿವ್ಯಾಂಗರ ಸಮಸ್ಯೆಗಳು ಜಾಗೃತಿ ಕಾರ್ಯಾಗಾರ ಮಾಹಿತಿ ನೀಡುವರು ಎಂದರು. 

ಸೆಪ್ಟೆಂಬರ್ 21 ರಂದು “ವಿಂಶತಿ ಸಂಭ್ರಮ-ಸದಸ್ಯರ ಸಮಾಗಮ” ಕಾರ್ಯಕ್ರಮವನ್ನು ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ಉದ್ಘಾಟಿಸುವರು. ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ್ ಸ್ವಾಮೀಜಿ ಆಶೀರ್ವಚನಗೈಯಲಿದ್ದು, ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಘನ ಉಪಸ್ಥಿತರಿರುವರು. ಮಾಜಿ ಸಚಿವ ಬಿ ರಮಾನಾಥ ರೈ ಅಶಕ್ತರಿಗೆ ಸಹಾಯಧನ ವಿತರಿಸುವರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ವಿವಿಧ ಸಾಧಕರನ್ನು ಗೌರವಿಸುವರು. ವರ್ತಕರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಅಧ್ಯಕ್ಷತೆ ವಹಿಸುವರು. 

ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್, ಸಹಕಾರಿ ಸಂಘಗಳ ಉಪನಿಬಂಧಕ ಎಚ್ ಎನ್ ರಮೇಶ್, ನಿಬಂಧಕ ಸುಧೀರ್ ಕುಮಾರ್ ಜೆ, ಮಂಗಳೂರು ಧವಳ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಸುದರ್ಶನ್ ಜೈನ್, ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ, ಬುಡಾ ಅಧ್ಯಕ್ಷ ಬೇಬಿ ಕುಂದರ್, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರುಗಳಾದ ನಾಗೇಶ್ ಕಲ್ಲಡ್ಕ, ಚಿತ್ತರಂಜನ್ ಬೋಳಾರ್, ಜೀವನ್ ಲಾಯ್ಡ್ ಪಿಂಟೋ, ಜಯಕೀರ್ತಿ ಜೈನ್, ಸುರೇಶ್ ಕುಲಾಲ್, ರಮೇಶ್ ನಾಯ್ಕ್ ರಾಯಿ, ಕೆ ಜಯಂತ್ ನಾಯಕ್, ಪದ್ಮನಾಭ ದೇವಾಡಿಗ ಭಾಗವಹಿಸುವರು ಎಂದ ಸುಭಾಶ್ಚಂದ್ರ ಜೈನ್ ಇದೇ ವೇಳೆ 15 ರಿಂದ 20 ಮಂದಿ ಅಶಕ್ತರಿಗೆ ಸಹಾಯಧನ ವಿತರಣೆ, ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಸ್ಥಾಪಕರು ಸಹಿತ ಹಲವರನ್ನು ಗುರುತಿಸಿ ಗೌರವಿಸಲಾಗುವುದು ಎಂದರು.

ಅಂದು ಮಧ್ಯಾಹ್ನ  ಸಂಘದ ವಾರ್ಷಿಕ ಮಹಾಸಭೆ, ಸಂಜೆ ಸಂಗೀತ ರಸಮಂಜರಿ, ಯಕ್ಷಗಾನ ಬಯಲಾಟ ನಡೆಯಲಿದೆ ಎಂದ ಜೈನ್, ಸೆಪ್ಟೆಂಬರ್ 22 ರಂದು ಸಂಘ ಹಾಗೂ ತುಳುಕೂಟ ಬಂಟ್ವಾಳ ಇದರ ಸಂಯೋಜನೆಯಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆ-24 ನಡೆಯಲಿದೆ. ಶ್ರೀಕೃಷ್ಣಾಷ್ಠಮಿಯಂದು ಮಳೆ ಹಾಗೂ ನೆರೆ ಕಾರಣದಿಂದ ಈ ಸ್ಪರ್ಧೆಯನ್ನು ಮುಂದೂಡಲಾಗಿತ್ತು ಎಂದರು.

ಸಂಘವು 13 ಶಾಖೆಗಳನ್ನು ಹೊಂದಿದ್ದು, ಎಲ್ಲಾ ಶಾಖೆಗಳಲ್ಲೂ ಗ್ರಾಹಕರ ಸಭೆ ನಡೆಸಿ ಪ್ರಚಾರ ಕೈಗೊಳ್ಳಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಯುವಕರನ್ನು ತೊಡಗಿಸಿಕೊಳ್ಳುವ ಉದ್ದೇಶದಿಂದ ಆಟೋಟ ಸ್ಪರ್ಧೆಗಳನ್ನು ನಡೆಸಲಾಗಿದೆ ಎಂದ ಅಧ್ಯಕ್ಷ ಜೈನ್ ಶಾಖಾ ಸಭೆಗಳಲ್ಲಿ ಭಾಗವಹಿಸಿದ ಗ್ರಾಹಕರ ಪೈಕಿ ಪ್ರತಿ ಶಾಖೆಯ ಒಬ್ಬರನ್ನು ಲಕ್ಕಿ ಸದಸ್ಯರನ್ನಾಗಿ ಆಯ್ಕೆ ಮಾಡಿ ಅವರನ್ನು ಗೌರವಿಸಲಾಗುವುದು ಎಂದರು. 

ಈ ಸಂದರ್ಭ ಸಂಘದ ಉಪಾಧ್ಯಕ್ಷ ಮಂಜುನಾಥ ರೈ ಅಗರಿ, ನಿರ್ದೇಶಕರಾದ ನಾರಾಯಣ ಸಿ. ಪೆರ್ನೆ, ರವೀಂದ್ರ, ಗಜೇಂದ್ರ ಪ್ರಭು, ಸುಧಾಕರ ಸಾಲ್ಯಾನ್, ಹೇಮಂತ್ ಕುಮಾರ್ ಜೈನ್, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್ ಜೈನ್, ಮೆನೇಜರ್ ಸದಾಶಿವ ಪುತ್ರನ್ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸೆ 20 ರಿಂದ 24ರವರೆಗೆ ಬಂಟ್ವಾಳ ವರ್ತಕರ ಸಹಕಾರಿ ಸಂಘದ ‘ವಿಂಶತಿ ಸಂಭ್ರಮ, ವರ್ತಕ-ಗ್ರಾಹಕ ಸಮಾಗಮ, ಗೃಹೋಪಯೋಗಿ ವಸ್ತುಗಳ ಮಾರಾಟ ಹಾಗೂ ತಿಂಡಿ-ತಿನಿಸುಗಳ ಮಹಾಮೇಳ Rating: 5 Reviewed By: karavali Times
Scroll to Top