ರಝಾಕ್ ಕರಾವಳಿ (ಅಧ್ಯಕ್ಷ) |
ದಾವೂದ್ ಹೊಸಮಠ (ಪ್ರಧಾನ ಕಾರ್ಯದರ್ಶಿ) |
ನೆಲ್ಯಾಡಿ, ಸೆಪ್ಟೆಂಬರ್ 01, 2024 (ಕರಾವಳಿ ಟೈಮ್ಸ್) : ಇಲ್ಲಿಗೆ ಸಮೀಪದ ಅರಸಿನಮಕ್ಕಿ ಬೀರಾನ್ (ರ), ನಾಝಿಮ್ ಶಾ (ರ) ದರ್ಗಾ ಶರೀಫ್, ರಹ್ಮಾನಿಯಾ ಜುಮಾ ಮಸೀದಿ ಹಾಗೂ ಖಲಂದರ್ ಷಾ ಎಜ್ಯುಕೇಶನ್ ಸೆಂಟರ್ ಇದರ ನೂತನ ಅಧ್ಯಕ್ಷರಾಗಿ ರಝಾಕ್ ಕರಾವಳಿ ನೆಲ್ಯಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ದಾವೂದ್ ಹೊಸಮಠ ಆಯ್ಕೆಯಾಗಿದ್ದಾರೆ.
ಶುಕ್ರವಾರ ರಹ್ಮಾನಿಯ ಮಸೀದಿಯಲ್ಲಿ ಎಸ್ ಬಿ ದಾರಿಮಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಮಸೀದಿ ಖತೀಬ್ ಉಮರ್ ಉಸ್ತಾದ್ ಉದ್ಘಾಟಿಸಿದರು.
ಗೌರವಾಧ್ಯಕ್ಷರಾಗಿ ಎಸ್ ಬಿ ದಾರಿಮಿ ಉಸ್ತಾದ್, ಉಪಾಧ್ಯಕ್ಷರುಗಳಾಗಿ ಹಾಜಿ ಅಬೂಬಕರ್ ಕೆ ಕೆ ಕೋಲ್ಪೆ, ಹಾಜಿ ಮೊಯಿದಿನ್ ಪುತ್ತು ಅಸರ್, ಜೊತೆ ಕಾರ್ಯದರ್ಶಿಗಳಾಗಿ ಯೂಸುಪ್ ಕೆ ಕೊಕ್ಕಡ, ಅಬ್ದುಲ್ ಖಾದಿರ್, ಕೋಶಾಧಿಕಾರಿಯಾಗಿ ಉಮರ್ ಬೈಲಂಗಡಿ, ಸಂಚಾಲಕರಾಗಿ ಇಸ್ಮಾಯಿಲ್ ತಂಙಳ್, ಸಲಹೆಗಾರರಾಗಿ ನಝೀರ್ ಮಠ ಅವರನ್ನು ಆರಿಸಲಾಯಿತು.
ಸಭೆಯಲ್ಲಿ ಉಪ್ಪಿನಂಗಡಿ ಜಮಾತ್ ಅಧ್ಯಕ್ಷ ಎಚ್ ಯೂಸುಪ್ ಹಾಜಿ, ಉದ್ಯಮಿ ಹಮೀದ್ ಕರಾವಳಿ ಉಪ್ಪಿನಂಗಡಿ, ಅಬ್ದುಲ್ ರಹ್ಮಾನ್ ಹಾಜಿ ಕೊಲ್ಲೆಜಾಲ್, ಯೂಸುಪ್ ಹಾಜಿ ಪೆದ್ಮಲೆ, ಎವರೆಸ್ಟ್ ಫಯಾಝ್, ಪ್ರಮುಖರಾದ ಹಕೀಂ ಕೊಕ್ಕಡ, ಶುಕೂರ್ ಶಾಮಿಯಾನ ನೆಲ್ಯಾಡಿ, ಮುಹಮ್ಮದ್ ಕೂಟೇಲ್, ಹನೀಪ್ ಹನೀಫಿ, ಮಜೀದ್ ಅರಸಿನಮಕ್ಕಿ ಮೊದಲಾದವರು ಭಾಗವಹಿಸಿದ್ದರು. ಅಬ್ಬಾಸ್ ಅರಸಿನ ಮಕ್ಕಿ ಸ್ವಾಗತಿಸಿ, ನಝೀರ್ ಮಠ ಪ್ರಸ್ತಾವನೆಗೈದರು.
0 comments:
Post a Comment