ಪಾಣೆಮಂಗಳೂರು : ಟ್ರಯಲ್ ನೋಡುವುದಾಗಿ ಹೇಳಿ ದ್ವಿಚಕ್ರ ವಾಹನ ಪಡೆದುಕೊಂಡು ವಾಪಾಸು ನೀಡದೆ ವಂಚನೆ - Karavali Times ಪಾಣೆಮಂಗಳೂರು : ಟ್ರಯಲ್ ನೋಡುವುದಾಗಿ ಹೇಳಿ ದ್ವಿಚಕ್ರ ವಾಹನ ಪಡೆದುಕೊಂಡು ವಾಪಾಸು ನೀಡದೆ ವಂಚನೆ - Karavali Times

728x90

21 August 2024

ಪಾಣೆಮಂಗಳೂರು : ಟ್ರಯಲ್ ನೋಡುವುದಾಗಿ ಹೇಳಿ ದ್ವಿಚಕ್ರ ವಾಹನ ಪಡೆದುಕೊಂಡು ವಾಪಾಸು ನೀಡದೆ ವಂಚನೆ

ಬಂಟ್ವಾಳ, ಆಗಸ್ಟ್ 22, 2024 (ಕರಾವಳಿ ಟೈಮ್ಸ್) : ಬೈಕ್ ಮಾರಾಟದ ಅಂಗಡಿಯಿಂದ ಟ್ರಯಲ್ ನೋಡುವುದಾಗಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಹೋಗಿ ವಾಪಾಸು ನೀಡದೆ ಪರಾರಿಯಾದ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದ್ದು, ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಪುದು ಗ್ರಾಮದ ನಿವಾಸಿ ಮಹಮ್ಮದ್ ಶಮೀರ್ ಬಿನ್ ಉಮರಬ್ಬ ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ಮೆಲ್ಕಾರ್-ಪಾಣೆಮಂಗಳೂರಿನಲ್ಲಿ ಬೈಕ್ ಪಾಯಿಂಟ್ ಎಂಬ ಹೆಸರಿನ  ಅಂಗಡಿ ಹೊಂದಿದ್ದು, ಸುಮಾರು 2 ವರ್ಷಗಳಿಂದ ಬೇರೆಯವರಿಂದ ವಾಹನಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯವಹಾರ ಮಾಡುತ್ತಿದ್ದಾರೆ. ಇವರು 2 ತಿಂಗಳ ಹಿಂದೆ ಕೆಎ70 ಇ9510 ನೋಂದಣಿ ಸಂಖ್ಯೆಯ ಟಿವಿಎಸ್125 ದ್ವಿಚಕ್ರ ವಾಹನವನ್ನು ಅದರ ನೋಂದಣಿ ಮಾಲಕರಿಂದ ಖರೀದಿಸಿ, ಮಾರಾಟಕ್ಕೆ ತನ್ನ ಅಂಗಡಿಯಲ್ಲಿ ಇಟ್ಟಿದ್ದರು. ಆಗಸ್ಟ್ 13 ರಂದು ಸಂಜೆ ಅಂಗಡಿಗೆ ಆಗಮಿಸಿದ ಅಪರಿಚಿತ ವ್ಯಕ್ತಿಯೊರ್ವ ಕೆಎ70 ಇ9510 ನೋಂದಣಿ ಸಂಖ್ಯೆಯ ಟಿವಿಎಸ್125 ವಾಹನವನ್ನು ಖರೀದಿಸುವುದಾಗಿ ಹೇಳಿ, ಟ್ರಯಲ್ ನೋಡಿ ಬರುವುದಾಗಿ ನಂಬಿಸಿ ದ್ವಿಚಕ್ರ ವಾಹನ ಪಡೆದುಕೊಂಡು ಟ್ರಯಲ್ ನೋಡಲು ಹೋದವರು ಈವರೆಗೆ ಹಿಂತಿರುಗಿಸದೇ ವಂಚಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪಾಣೆಮಂಗಳೂರು : ಟ್ರಯಲ್ ನೋಡುವುದಾಗಿ ಹೇಳಿ ದ್ವಿಚಕ್ರ ವಾಹನ ಪಡೆದುಕೊಂಡು ವಾಪಾಸು ನೀಡದೆ ವಂಚನೆ Rating: 5 Reviewed By: karavali Times
Scroll to Top