ಬಂಟ್ವಾಳ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖೆ ಹಾಗೂ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಆಲಡ್ಕ-ಪಾಣೆಮಂಗಳೂರು ಇದರ ವತಿಯಿಂದ ದೇಶದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ ಗುರುವಾರ ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಮುಂಭಾಗದಲ್ಲಿ ಆಚರಿಸಲಾಯಿತು.
ಶಾಖಾಧ್ಯಕ್ಷ ಇಸ್ಹಾಕ್ ಫ್ಯಾಶನ್ ವೇರ್ ಧ್ವಜಾರೋಹಣ ನೆರವೇರಿಸಿದರು. ಗುಡ್ಡೆಅಂಗಡಿ ಜುಮಾ ಮಸೀದಿ ಖತೀಬ್ ಅಸ್ವೀಫ್ ದಾರಿಮಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಬಶೀರ್ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು.
ಈ ಸಂಧರ್ಭ ಶಾಖಾ ಉಪಾಧ್ಯಕ್ಷ ಅಬ್ದುಲ್ ಮಜೀದ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಫಿಕ್ ಆಲಡ್ಕ, ಕೋಶಾಧಿಕಾರಿ ಹ£ನೀಫ್ ಹಾಸ್ಕೊ, ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬೂಬಕರ್ ಮೆಲ್ಕಾರ್, ಎಸ್ಕೆಎಸ್ಸೆಸ್ಸೆಫ್ ಗುಡ್ಡೆಅಂಗಡಿ ಶಾಖಾಧ್ಯಕ್ಷ ಸಾದಿಕ್ ಬೋಗಡಿ, ಪ್ರಮುಖರಾದ ಅಬ್ದುಲ್ ಅಝೀಝ್ ಪಿ ಐ, ಮುಹಮ್ಮದ್ ರಫೀಕ್ ಬೋಗೋಡಿ, ಸವಾದ್ ಗೂಡಿನಬಳಿ, ರಫೀಕ್ ಇನೋಳಿ, ಶರೀಫ್ ಭೂಯಾ, ಹನೀಫ್ ಬೋಗೋಡಿ, ಆರೀಫ್ ಮೊಯಿದಿನಬ್ಬ, ಹನೀಫ್ ಡ್ರೈಫಿಶ್, ಹಾಜಿ ಉಮ್ಮರ್ ಫಾರೂಕ್ ಪಿವಿಎಸ್, ಸಲಾಂ ಕುಕ್ಕಾಜೆ, ಅಶ್ರಫ್ ಪರ್ಲಿಯಾ, ಕಾಸಿಂ ಬೋಗೋಡಿ, ನವಾಝ್ ಬೋಗೋಡಿ, ಸಾಜಿದ್ ಬೋಗೋಡಿ, ಹಸೈನಾರ್ ದೇರಳಕಟ್ಟೆ, ಸೈಫುಧ್ದೀನ್, ಖಾದಿರಾಕ ಗುಡ್ಡೆಅಂಗಡಿ, ಫಾರೂಕ್ ಬೋಗೋಡಿ, ಬಶೀರ್, ಹನೀಫ್ ಇಲೆಕ್ಟ್ರೀಷಿಯನ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಪವಿತ್ರ ಉಮ್ರಾ ಯಾತ್ರೆ ಕೈಗೊಳ್ಳಲಿರುವ ಗುಡ್ಡೆಅಂಗಡಿ ನೂರುದ್ದೀನ್ ಜುಮ್ಮಾ ಮಸೀದಿ ಖತೀಬ್ ಹಸ್ವೀಫ್ ದಾರಿಮಿ ಅವರನ್ನು ಅಲಡ್ಕ ಶಾಖಾ ವತಿಯಿಂದ ಸನ್ಮಾನಿಸಲಾಯಿತು.
0 comments:
Post a Comment