ತಡವಾಗಿಯಾದರೂ ಕೊನೆಗೂ ಹಿರಿಯ ಕಾಂಗ್ರೆಸ್ಸಿಗನಿಗೆ ಒಲಿದ ಬಂಟ್ವಾಳ ಪುರಸಭಾ ಅಧ್ಯಕ್ಷ ಪಟ್ಟ : ಬಹುಮತದ ಸಂಖ್ಯಾಬಲ ಇದ್ದರೂ 2ನೇ ಬಾರಿಗೆ ನಿರಾಸೆ ಅನುಭವಿಸಿದ ಹಿರಿಯ ಬಿಜೆಪಿ ಸದಸ್ಯ, ಹೊಂದಾಣಿಕೆ ರಾಜಕೀಯದಿಂದ ಪುರಸಭೆಯಲ್ಲಿ ಮೊದಲ ಬಾರಿಗೆ ಅಧಿಕಾರದ ಹಂತಕ್ಕೇರಿದ ಎಸ್.ಡಿ.ಪಿ.ಐ. - Karavali Times ತಡವಾಗಿಯಾದರೂ ಕೊನೆಗೂ ಹಿರಿಯ ಕಾಂಗ್ರೆಸ್ಸಿಗನಿಗೆ ಒಲಿದ ಬಂಟ್ವಾಳ ಪುರಸಭಾ ಅಧ್ಯಕ್ಷ ಪಟ್ಟ : ಬಹುಮತದ ಸಂಖ್ಯಾಬಲ ಇದ್ದರೂ 2ನೇ ಬಾರಿಗೆ ನಿರಾಸೆ ಅನುಭವಿಸಿದ ಹಿರಿಯ ಬಿಜೆಪಿ ಸದಸ್ಯ, ಹೊಂದಾಣಿಕೆ ರಾಜಕೀಯದಿಂದ ಪುರಸಭೆಯಲ್ಲಿ ಮೊದಲ ಬಾರಿಗೆ ಅಧಿಕಾರದ ಹಂತಕ್ಕೇರಿದ ಎಸ್.ಡಿ.ಪಿ.ಐ. - Karavali Times

728x90

22 August 2024

ತಡವಾಗಿಯಾದರೂ ಕೊನೆಗೂ ಹಿರಿಯ ಕಾಂಗ್ರೆಸ್ಸಿಗನಿಗೆ ಒಲಿದ ಬಂಟ್ವಾಳ ಪುರಸಭಾ ಅಧ್ಯಕ್ಷ ಪಟ್ಟ : ಬಹುಮತದ ಸಂಖ್ಯಾಬಲ ಇದ್ದರೂ 2ನೇ ಬಾರಿಗೆ ನಿರಾಸೆ ಅನುಭವಿಸಿದ ಹಿರಿಯ ಬಿಜೆಪಿ ಸದಸ್ಯ, ಹೊಂದಾಣಿಕೆ ರಾಜಕೀಯದಿಂದ ಪುರಸಭೆಯಲ್ಲಿ ಮೊದಲ ಬಾರಿಗೆ ಅಧಿಕಾರದ ಹಂತಕ್ಕೇರಿದ ಎಸ್.ಡಿ.ಪಿ.ಐ.

ವಾಸು ಪೂಜಾರಿ
ಮೂನಿಶ್ ಅಲಿ

 ಬಂಟ್ವಾಳ, ಆಗಸ್ಟ್ 22, 2024 (ಕರಾವಳಿ ಟೈಮ್ಸ್) : ಬಂಟ್ವಾಳ ಪುರಸಭೆಯಲ್ಲಿ ತಡವಾಗಿಯಾದರೂ ಕೊನೆಗೂ ಹಿರಿಯ ಹಾಗೂ ನಿಷ್ಠಾವಂತ ಕಾಂಗ್ರೆಸ್ಸಿಗನಿಗೆ ಅಧ್ಯಕ್ಷಗಾದಿ ಒಲಿದು ಬಂದಿದೆ. ಕೆಲವು ಬಾರಿ ಅಧ್ಯಕ್ಷ ಹುದ್ದೆಗೆ ಆಕಾಂಕ್ಷಿಯಾಗಿದ್ದರೂ ಕೊನೆ ಕ್ಷಣದಲ್ಲಿ ಆಗುತ್ತಿದ್ದ ಬೆಳವಣಿಗೆಗಳಿಂದ ಅವಕಾಶ ವಂಚಿತರಾಗುತ್ತಿದ್ದ ವಾಸು ಪೂಜಾರಿ ಈ ಬಾರಿ ಅದೃಷ್ಟ ಖುಲಾಯಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 

ಇಲ್ಲಿನ ಪುರಸಭೆಯ ದ್ವಿತೀಯ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಗುರುವಾರ ನಡೆದಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬಿ ವಾಸು ಪೂಜಾರಿ ಲೊರೆಟ್ಟೊ ಹಾಗೂ ಉಪಾಧ್ಯಕ್ಷರಾಗಿ ಎಸ್ ಡಿ ಪಿ ಐ ಪಕ್ಷದ ಮೂನಿಶ್ ಅಲಿ ಆಯ್ಕೆಯಾಗಿದ್ದಾರೆ. 

ಪುರಸಭೆಯ 27 ಮಂದಿ ಚುನಾಯಿತ ಸದಸ್ಯರ ಪೈಕಿ ಕಾಂಗ್ರೆಸ್ ಪಕ್ಷದ ಸದಸ್ಯ ಗಂಗಾಧರ ಪೂಜಾರಿ ಇತ್ತೀಚೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರಿಂದ ಪುರಸಭೆಯ ಸದಸ್ಯ ಬಲ 26ಕ್ಕಿಳಿದಿತ್ತು. ಈ ಪೈಕಿ ಕೈ-ಕಮಲ ತಲಾ 11 ಸ್ಥಾನ ಹೊಂದಿದ್ದು, ಎಸ್ ಡಿ ಪಿ ಐ 4 ಸದಸ್ಯ ಬಲ ಹೊಂದಿ ನಿರ್ಣಾಯಕವಾಗಿತ್ತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಕಾಂಗ್ರೆಸ್ಸಿನಿಂದ ವಾಸು ಪೂಜಾರಿ, ಬಿಜೆಪಿಯಿಂದ ಎ ಗೋವಿಂದ ಪ್ರಭು ಹಾಗೂ ಎಸ್ ಡಿ ಪಿ ಐ ಪಕ್ಷದಿಂದ ಇದ್ರೀಸ್ ಪಿ ಜೆ ಅವರು ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಹರಿಪ್ರಸಾದ್ ಹಾಗೂ ಎಸ್ ಡಿ ಪಿ ಐ ಪಕ್ಷದಿಂದ ಮೂನಿಶ್ ಅಲಿ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಪಕ್ಷದಿಂದ ಯಾರೂ ನಾಮಪತ್ರ ಸಲ್ಲಿಸದೆ ಕಾದು ನೋಡುವ ತಂತ್ರ ಅನುಸರಿಸಿತ್ತು. ಆದರೆ ಕೊನೆ ಕ್ಷಣದಲ್ಲಿ ಆದ ಬೆಳವಣಿಗೆ ಹಾಗೂ ಹೊಂದಾಣಿಕೆ ರಾಜಕೀಯದಿಂದಾಗಿ ಎಸ್ ಡಿ ಪಿ ಐ ಪಕ್ಷದ ಅಧ್ಯಕ್ಷ ಅಭ್ಯರ್ಥಿ ಇದ್ರೀಸ್ ಅವರು ನಾಮಪತ್ರ ವಾಪಾಸು ಪಡೆದು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಹಿನ್ನಲೆಯಲ್ಲಿ ಕೈ ಪಾಳಯದ ಬಿ ವಾಸು ಪೂಜಾರಿ ಲೊರೆಟ್ಟೊ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯರುಗಳು ಎಸ್ ಡಿ ಪಿ ಐ ಅಭ್ಯರ್ಥಿ ಮೂನಿಶ್ ಅಲಿ ಅವರಿಗೆ ಬೆಂಬಲಿಸಿದ್ದರಿಂದ ಮೂನಿಶ್ ಅಲಿ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾದರು. 

ಬಿಜೆಪಿ ಪಕ್ಷಕ್ಕೆ ಸಂಸದ ಹಾಗೂ ಶಾಸಕರ ಮತ ಇದ್ದು, ಒಟ್ಟು ಸದಸ್ಯ ಬಲ 13 ಆದರೂ ಕಾಂಗ್ರೆಸ್-ಎಸ್ ಡಿ ಪಿ ಐ ಸದಸ್ಯರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದರಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಸೋಲನುಭವಿಸಿದೆ. ಈ ಮೂಲಕ ಬಂಟ್ವಾಳ ಪುರಸಭೆಯನ್ನು ಮತ್ತೆ ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಈ ಬಾರಿ ವಾಸು ಪೂಜಾರಿ ಅವರಿಗೆ ಅದೃಷ್ಟ ಖುಲಾಯಿಸಿದರೆ, ಬಿಜೆಪಿಯಿಂದ ಅಧ್ಯಕ್ಷಗಾದಿಗೆ ಸ್ಪರ್ಧಿಸಿದ್ದ ಗೋವಿಂದ ಪ್ರಭು ಬಹುಮತದ ಸದಸ್ಯ ಬಲದ ಬೆಂಬಲ ಇದ್ದರೂ ರಾಜಕೀಯ ಚದುರಂಗದಾಟದಲ್ಲಿ ಎರಡನೇ ಬಾರಿ ನಿರಾಸೆ ಅನುಭವಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ತಡವಾಗಿಯಾದರೂ ಕೊನೆಗೂ ಹಿರಿಯ ಕಾಂಗ್ರೆಸ್ಸಿಗನಿಗೆ ಒಲಿದ ಬಂಟ್ವಾಳ ಪುರಸಭಾ ಅಧ್ಯಕ್ಷ ಪಟ್ಟ : ಬಹುಮತದ ಸಂಖ್ಯಾಬಲ ಇದ್ದರೂ 2ನೇ ಬಾರಿಗೆ ನಿರಾಸೆ ಅನುಭವಿಸಿದ ಹಿರಿಯ ಬಿಜೆಪಿ ಸದಸ್ಯ, ಹೊಂದಾಣಿಕೆ ರಾಜಕೀಯದಿಂದ ಪುರಸಭೆಯಲ್ಲಿ ಮೊದಲ ಬಾರಿಗೆ ಅಧಿಕಾರದ ಹಂತಕ್ಕೇರಿದ ಎಸ್.ಡಿ.ಪಿ.ಐ. Rating: 5 Reviewed By: karavali Times
Scroll to Top