ಬಂಟ್ವಾಳ, ಆಗಸ್ಟ್ 14, 2024 (ಕರಾವಳಿ ಟೈಮ್ಸ್) : ಬಿ ಸಿ ರೋಡು ಕುಲಾಲ ಭವನದ ಬಳಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಉಳ್ಳಾಲ ತಾಲೂಕಿನ ಚೇಳೂರು ನಿವಾಸಿ ಚಿನ್ನಯ್ಯ ಸಾಲಿಯಾನ್ ಅವರು ಆಗಸ್ಟ್ 11 ರಂದು ಬೆಳಿಗ್ಗೆ ತನ್ನ ಕೆಎ19 ಇಎಫ್3583 ನೋಂದಣಿ ಸಂಖ್ಯೆಯ ಸ್ಕೂಟರನ್ನು ಬಿ ಮೂಡ ಗ್ರಾಮದ ಪೆÇಸಳ್ಳಿ ಕುಲಾಲ ಭವನದ ಬಳಿ ನಿಲ್ಲಿಸಿ ಕಾರ್ಯಕ್ರಮವೊಂದಕ್ಕೆ ತೆರಳಿದ್ದು, ಕೆಲ ತಾಸಿನ ಬಳಿಕ ವಾಪಾಸು ಬಂದು ನೋಡಿದಾಗ ಸ್ಕೂಟರ್ ಕಾಣದಾಗಿರುತ್ತದೆ. ಈ ಬಗ್ಗೆ ಸುತ್ತಮುತ್ತಲಿನ ಪರಿಸರದಲ್ಲಿ ವಿಚಾರಿಸಿದ ಬಳಿಕ ಬುಧವಾರ ಬಂಟ್ವಾಳ ನಗರ ಪೊಲೀಸರಿಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
0 comments:
Post a Comment