ಕಾವಳಕಟ್ಟೆ : ಆದಿ ಶಕ್ತಿ ಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿ ಹಣ ಸಿಸಿ ಟಿವಿ ಡಿವಿಆರ್ ಕದ್ದೊಯ್ದ ಕಳ್ಳರು - Karavali Times ಕಾವಳಕಟ್ಟೆ : ಆದಿ ಶಕ್ತಿ ಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿ ಹಣ ಸಿಸಿ ಟಿವಿ ಡಿವಿಆರ್ ಕದ್ದೊಯ್ದ ಕಳ್ಳರು - Karavali Times

728x90

19 August 2024

ಕಾವಳಕಟ್ಟೆ : ಆದಿ ಶಕ್ತಿ ಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿ ಹಣ ಸಿಸಿ ಟಿವಿ ಡಿವಿಆರ್ ಕದ್ದೊಯ್ದ ಕಳ್ಳರು

ಬಂಟ್ವಾಳ, ಆಗಸ್ಟ್ 19, 2024 (ಕರಾವಳಿ ಟೈಮ್ಸ್) : ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಬೊಳ್ಳಿಮಾರು ಶ್ರೀ ಆದಿ ಶಕ್ತಿ ಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿ ಒಡೆದು ನಗದು ಕಳವುಗೈದ ಘಟನೆ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. 

ಈ ಬಗ್ಗೆ ದೇವಸ್ಥಾನದ ಧರ್ಮದರ್ಶಿ ವಿಜಯ ಸಾಲ್ಯಾನ್ (36) ಪೊಲೀಸರಿಗೆ ದೂರು ನೀಡಿದ್ದು, ದೇವಸ್ಥಾನದಲ್ಲಿ ಕಾಣಿಕೆ ಹಾಕಲು ಇಡಲಾಗಿದ್ದ ಮೂರು ಸ್ಟೀಲ್ ಕಾಣಿಕೆ ಡಬ್ಬಿಗಳನ್ನು ಆಗಸ್ಟ್ 17 ರ ರಾತ್ರಿಯಿಂದ ಮರುದಿನ ಬೆಳಿಗ್ಗಿನ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ದೇವಸ್ಥಾನಕ್ಕೆ ಬಂದು ದೇವಸ್ಥಾನಕ್ಕೆ ಅಳವಡಿಸಿದ ಸಿಸಿ ಕ್ಯಾಮರಗಳನ್ನು ಹಾಳು ಮಾಡಿ, ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 1 ಸಾವಿರ ರೂಪಾಯಿ ನಗದು ಹಣ ಹಾಗೂ ಸುಮಾರು 8 ಸಾವಿರ ರೂಪಾಯಿ ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಕಾವಳಕಟ್ಟೆ : ಆದಿ ಶಕ್ತಿ ಕೊರಗಜ್ಜ ಕ್ಷೇತ್ರದ ಕಾಣಿಕೆ ಡಬ್ಬಿ ಹಣ ಸಿಸಿ ಟಿವಿ ಡಿವಿಆರ್ ಕದ್ದೊಯ್ದ ಕಳ್ಳರು Rating: 5 Reviewed By: karavali Times
Scroll to Top