ಬಂಟ್ವಾಳ, ಆಗಸ್ಟ್ 14, 2024 (ಕರಾವಳಿ ಟೈಮ್ಸ್) : ತಾಲೂಕಿನ ಶಂಭೂರು ಗ್ರಾಮದ ಕುಂದಾಯ ಮಜಲು ಎಂಬಲ್ಲಿ ಪುತ್ತೂರು ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ನೇತ್ರಾವತಿ ನದಿಯಿಂದ ನೀರು ಸರಬರಾಜು ಮಾಡುವ ಉದ್ದೇಶದಿಂದ ಶಂಭೂರು-ಬಾಳ್ತಿಲ ಗಡಿ ಪ್ರದೇಶವಾದ ಕುಂದಾಯ ಮಜಲು ಎಂಬಲ್ಲಿ ಕಾಮಗಾರಿ ನಡೆಯುತ್ತಿದ್ದು, ಸದ್ರಿ ಪ್ರದೇಶದಲ್ಲಿ ಅಕ್ರಮವಾಗಿ ಬಂಡೆಗಳನ್ನು ಸ್ಪೋಟಿಸುತ್ತಿರು ಕೃತ್ಯ ನಡೆಯುತ್ತಿದೆ. ಈ ಸ್ಪೋಟದಿಂದ ಇಲ್ಲಿನ ಸುಮಾರು 65 ಮನೆಗಳಿಗೆ ತೀವ್ರ ತರದ ಹಾನಿಯಾಗಿದೆ. ಇದರಿಂದ ಸ್ಥಳೀಯ ವಾಸಿಗಳು ಭಯಭೀತರಾಗಿ ವಲಸೆ ಹೋಗುವ ಪರಿಸ್ಥಿತಿ ಉಂಟಾಗಿದೆ. ಸದ್ರಿ ಕಾಮಗಾರಿ ಮುಂದುವರಿದರೆ ಇನ್ನಷ್ಟು ಅಪಾಯ ಉಂಟಾಗುವ ಸಂಭವ ಇರುವ ಹಿನ್ನಲೆಯಲ್ಲಿ ಸ್ಥಳೀಯರ ಅಪೇಕ್ಷೆ ಮೇರೆಗೆ ಮಾಜಿ ಸಚಿವ ಬಿ ರಮಾನಾಥ ರೈ ಅವರು ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತನಾಡಿದ ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭ ನರಿಕೊಂಬು ಗ್ರಾ ಪಂ ಮಾಜಿ ಅಧ್ಯಕ್ಷ ಆನಂದ ಸಾಲಿಯಾನ್ ಶಂಭೂರು, ಪ್ರಮುಖರಾದ ಕೂಸಪ್ಪ ಪೂಜಾರಿ ಕುಂದಾಯ ಮಜಲು, ಚಂದಪ್ಪ ಪೂಜಾರಿ ಕುಂದಾಯ ಮಜಲು. ಮೋನಪ್ಪ ಮುಗೇರ ಪಡ್ಪು, ಗಿಲ್ಬರ್ಟ್ ಬುಕೆಲೋ ಸಹಿತ ಸ್ಥಳೀಯ ಸಂತ್ರಸ್ತರು ಉಪಸ್ಥಿತರಿದ್ದರು.
0 comments:
Post a Comment