ಬೆಳ್ತಂಗಡಿ, ಆಗಸ್ಟ್ 21, 2024 (ಕರಾವಳಿ ಟೈಮ್ಸ್) : ನಿವೃತ್ತ ಮುಖ್ಯೋಪಾಧ್ಯಾಯರೋರ್ವರನ್ನು ಮನೆಯಂಗಳದಲ್ಲೇ ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ಬೆಳಾಲು ಗ್ರಾಮದ ಎಸ್ ಪಿ ಬಿ ಕಂಪೌಂಡ್ ಎಂಬ ಮನೆಯಂಗಳದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.
ಕೊಲೆಯಾದ ನಿವೃತ್ತ ಮುಖ್ಯೋಪಾಧ್ಯಾಯರನ್ನು ಇಲ್ಲಿನ ನಿವಾಸಿ ಎಸ್ ಪಿ ಬಾಲಕೃಷ್ಣ ಬಡೆಕ್ಕಿಲ್ಲಾಯ (83) ಎಂದು ಗುರುತಿಸಲಾಗಿದೆ. ಈ ಬಗ್ಗೆ ಅವರ ಪುತ್ರ ಸುರೇಶ್ (48) ಅವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇವರು ಮಂಗಳವಾರ ಬೆಳಿಗ್ಗೆ ಮನೆಯ ಕೆಲಸ ಮುಗಿಸಿ, ಪುತ್ತೂರಿಗೆ ಹೋಗಿರುತ್ತಾರೆ. ಈ ವೇಳೆ ತಂದೆಯವರು ಮನೆಯಲ್ಲಿದ್ದರು. ಸುರೇಶ್ ಸಂಜೆ ಪುತ್ತೂರಿ£ಂದ ವಾಪಾಸ್ ಬಂದಾಗ, ಮನೆಯ ಬಾಗಿಲು ತೆರೆದುಕೊಂಡಿದ್ದು, ಮನೆಯ ಎದುರು ಅಂಗಳದಲ್ಲಿ ತಂದೆಯವರು ಬಿದ್ದುಕೊಂಡಿರುವ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಅವರ ಮೈಯ್ಯಲ್ಲೆಲ್ಲಾ ರಕ್ತದಿಂದ ಕೂಡಿದ್ದು, ನೋಡಿದಾಗ ತಂದೆ ಮೃತಪಟ್ಟಿರುವುದು ದೃಢಪಟ್ಟಿರುತ್ತದೆ. ಮಂಗಳವಾರ ಬೆಳಿಗ್ಗೆ ಸುಮಾರು 11.45 ಗಂಟೆಯಿಂದ ಸಂಜೆ ಸುಮಾರು 4.30 ಗಂಟೆಯ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಆಯುಧದಿಂದ ಕಡಿದು ಕೊಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 62/2024 ಕಲಂ 103 ಬಿ ಎನ್ ಎಸ್ ಪ್ರಕಾರ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.
0 comments:
Post a Comment