ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ : ಪೆರ್ನೆ, ಮಾಣಿಲ, ಕುಕ್ಕಿಪ್ಪಾಡಿ ಗ್ರಾಮಗಳಲ್ಲಿ ಮನೆಗೆ ಹಾನಿ - Karavali Times ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ : ಪೆರ್ನೆ, ಮಾಣಿಲ, ಕುಕ್ಕಿಪ್ಪಾಡಿ ಗ್ರಾಮಗಳಲ್ಲಿ ಮನೆಗೆ ಹಾನಿ - Karavali Times

728x90

1 August 2024

ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ : ಪೆರ್ನೆ, ಮಾಣಿಲ, ಕುಕ್ಕಿಪ್ಪಾಡಿ ಗ್ರಾಮಗಳಲ್ಲಿ ಮನೆಗೆ ಹಾನಿ

ಬಂಟ್ವಾಳ, ಆಗಸ್ಟ್ 01, 2024 (ಕರಾವಳಿ ಟೈಮ್ಸ್) : ಬಂಟ್ವಾಳದಲ್ಲಿ ಮಳೆ ಹಾನಿ ಪ್ರಕರಣಗಳು ಮುಂದುವರಿದಿದ್ದು, ಪೆರ್ನೆ ಗ್ರಾಮದ ಪೆರ್ನೆ ನಿವಾಸಿ ಮೈಮುನ ಕೋಂ ಇಸ್ಮಾಯಿಲ್ ಅವರ ಮನೆಯ ಹತ್ತಿರದ ತೋಡಿನ ಬದಿಯ ಬರೆ ಕುಸಿದು ಮನೆಯು ಅಪಾಯದಂಚಿನಲ್ಲಿದ್ದು, ಕುಟುಂಬ ಸದಸ್ಯರು ಸಂಬAಧಿಕರ ಮನೆಗೆ ಸ್ಥಳಾಂತರಗೊAಡಿದ್ದಾರೆ. ಮಾಣಿಲ ಗ್ರಾಮದ ತಾರಿದಳ ನಿವಾಸಿ ವನಿತಾ ಕೋಂ ಬಾಳಪ್ಪ ಕುಲಾಲ್ ಅವರ ಮನೆಯ ಆವರಣ ಗೋಡೆ ಕುಸಿದಿರುತ್ತದೆ. ವಾಸ್ತವ್ಯದ ಮನೆಗೆ ಯಾವುದೇ ಹಾನಿಯಾಗಿರುವುದಿಲ್ಲ. ಕುಕ್ಕಿಪಾಡಿ ಗ್ರಾಮದ ನಿವಾಸಿ ಲಿಂಗಪ್ಪ ಪೂಜಾರಿ ಬಿನ್ ಕೊರಗಪ್ಪ ಪೂಜಾರಿ ಅವರ ಅಡಿಕೆ ತೋಟದ ಬದಿಯಲ್ಲಿರುವ ನೀರಿನ ತೋಡಿಗೆ ಬರೆ ಜರಿದು ತೋಡಿನ ನೀರು ತೋಟ ಮತ್ತು ಗದ್ದೆಗಳ ಮೂಲಕ ಹರಿಯುತ್ತಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳದಲ್ಲಿ ಮುಂದುವರಿದ ಮಳೆ ಹಾನಿ : ಪೆರ್ನೆ, ಮಾಣಿಲ, ಕುಕ್ಕಿಪ್ಪಾಡಿ ಗ್ರಾಮಗಳಲ್ಲಿ ಮನೆಗೆ ಹಾನಿ Rating: 5 Reviewed By: karavali Times
Scroll to Top