ಬಂಟ್ವಾಳ, ಆಗಸ್ಟ್ 02, 2024 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಮಳೆ ಹಾಗೂ ಮಳೆ ಹಾನಿ ಮುಂದುವರಿದಿದೆ. ಪುದು ಗ್ರಾಮದ ಕಲ್ಲತಡಮೆ ನಿವಾಸಿ ಸತೀಶ್ ಬಿನ್ ಕೂಸಪ್ಪ ಸಪಲ್ಯ ಅವರ ಮನೆ ಹಂಚು ಪೂರ್ತಿ ಕುಸಿದು ಮನೆ ಗೋಡೆ ಹಾನಿಯಾಗಿರುತ್ತದೆ. ಚೆನ್ನೈತೋಡಿ ಗ್ರಾಮದ ಮೇಗಿನ ಮನೆ ನಿವಾಸಿ ಮೋನಮ್ಮ ಅವರ ಕಚ್ಚಾ ಮನೆ ತೀವ್ರ ಹಾನಿಯಾಗಿದೆ. ಸದ್ರಿಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಮಾಣಿಲ ಗ್ರಾಮದ ಪಿಲಿಂಗುರಿ ಎಂಬಲ್ಲಿ ಜಯಶ್ರೀ ಕೋಂ ನಾರಾಯಣ ನಾಯ್ಕ ಅವರ ಕೊಟ್ಟಿಗೆಗೆ ಅಕೇಶಿಯ ಮರ ಬಿದ್ದು ಹಾನಿಯಾಗಿದ್ದು, ವಾಸ್ತವ್ಯದ ಮನೆಗೆ ಯಾವುದೇ ಹಾನಿಯಾಗಿರುವುದಿಲ್ಲ.
ವಿಟ್ಲಮುಡ್ನೂರು ಗ್ರಾಮದ ಕುಂಡಡ್ಕ ಶೆಡ್ಡು ನಿವಾಸಿ ಶ್ರೀಮತಿ ಶ್ಯಾಮಲಾ ಕೋಂ ಶಿವಾನಂದ ರೈ ಮನೆ ಸಮೀಪ ಗುಡ್ಡ ಕುಸಿದಿರುತ್ತದೆ. ಕನ್ಯಾನ ಗ್ರಾಮದ ಬೊಟ್ಯದಮೂಲೆ ಎಂಬಲ್ಲಿ ಮೈಮುನ ಕೋಂ ಖಲೀಲ್ ಅಂದುಕ ಅವರ ವಾಸ್ತವ್ಯದ ಮನೆಗೆ ಗುಡ್ಡ ಕುಸಿದು ಭಾಗಶಃ ಹಾನಿಯಾಗಿರುತ್ತದೆ. ಮಾಣಿ ಗ್ರಾಮದ ಮಾಣಿಕೋಡಿ ನಿವಾಸಿ ವನಜ ಕೋಂ ರಾಮಕೃಷ್ಣ ಪೂಜಾರಿ ಅವರ ಮನೆಗೆ ಪಕ್ಕದಲ್ಲಿನ ಗುಡ್ಡ ಕುಸಿದು ಭಾಗಶಃ ಹಾನಿಯಾಗಿದೆ.
0 comments:
Post a Comment