ಅಂಚೆ ಇಲಾಖೆಯಿಂದ 6 ರಿಂದ 9ನೇ ತರಗತಿ ಮಕ್ಕಳಿಗೆ “ದೀನ್ ದಯಾಳ್ ಸ್ಪರ್ಶ್ ಯೋಜನೆ” ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ - Karavali Times ಅಂಚೆ ಇಲಾಖೆಯಿಂದ 6 ರಿಂದ 9ನೇ ತರಗತಿ ಮಕ್ಕಳಿಗೆ “ದೀನ್ ದಯಾಳ್ ಸ್ಪರ್ಶ್ ಯೋಜನೆ” ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ - Karavali Times

728x90

19 August 2024

ಅಂಚೆ ಇಲಾಖೆಯಿಂದ 6 ರಿಂದ 9ನೇ ತರಗತಿ ಮಕ್ಕಳಿಗೆ “ದೀನ್ ದಯಾಳ್ ಸ್ಪರ್ಶ್ ಯೋಜನೆ” ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ

ಮಂಗಳೂರು/ ಪುತ್ತೂರು, ಆಗಸ್ಟ್ 19, 2024 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆಯು 6ನೇ ತರಗತಿಯಿಂದ 9ನೇ ತರಗತಿಗಳಲ್ಲಿ ಓದುತ್ತಿರುವ ಶಾಲಾ ವಿದ್ಯಾರ್ಥಿಗಳಲ್ಲಿ ‘ಫಿಲಾಟೆಲಿ’ (ಅಂಚೆ ಚೀಟಿ ಸಂಗ್ರಹಣೆ) ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಘೋಷಿಸಲಾದ “ದೀನ್ ದಯಾಲ್ ಸ್ಪರ್ಶ್ ಯೋಜನೆ” ಸ್ಕಾಲರ್ ಶಿಪ್ ಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಸೆಪ್ಟೆಂಬರ್ 3 ರೊಳಗೆ ಹಿರಿಯ ಅಂಚೆ ಅಧೀಕ್ಷಕರು, ಪುತ್ತೂರು ವಿಭಾಗ, ಪುತ್ತೂರು-574 201 ಹಾಗೂ ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು -575002 ಇವರಿಗೆ ತ್ವರಿತ ಅಂಚೆ (ಸ್ಪೀಡ್ ಪೆÇೀಸ್ಟ್ ) ಅಥವಾ ನೋಂದಾಯಿತ ಅಂಚೆ ಮೂಲಕ ತಲುಪುವಂತೆ ಅರ್ಜಿ ಸಲ್ಲಿಸತಕ್ಕದ್ದು. ಕಳೆದ ಬಾರಿಯ ವಾರ್ಷಿಕ ಪರೀಕ್ಷೆಯಲ್ಲಿ 60% ಗಿಂತ ಅಧಿಕ ಅಂಕಗಳನ್ನು (2023-24) ಗಳಿಸಿದ್ದು ಫಿಲಾಟೆಲಿ ಖಾತೆ ಅಥವಾ ಶಾಲಾ ಫಿಲಾಟೆಲಿ ಕ್ಲಬ್ ಸದಸ್ಯರಾಗಿರೋ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ. ಹೆಚ್ಚಿನ ವಿವರಗಳಿಗಾಗಿ www.karnatakapost.gov.in ವೆಬ್ ಸೈಟಿಗೆ ಅಥವಾ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡುವಂತೆ ಮಂಗಳೂರು ಹಾಗೂ ಪುತ್ತೂರು ಅಂಚೆ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಇಲಾಖೆಯಿಂದ 6 ರಿಂದ 9ನೇ ತರಗತಿ ಮಕ್ಕಳಿಗೆ “ದೀನ್ ದಯಾಳ್ ಸ್ಪರ್ಶ್ ಯೋಜನೆ” ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ Rating: 5 Reviewed By: karavali Times
Scroll to Top