ನರಿಕೊಂಬು : ಸೆಪ್ಟೆಂಬರ್ 7 ರಿಂದ 9ರವರೆಗೆ 42ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ - Karavali Times ನರಿಕೊಂಬು : ಸೆಪ್ಟೆಂಬರ್ 7 ರಿಂದ 9ರವರೆಗೆ 42ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ - Karavali Times

728x90

27 August 2024

ನರಿಕೊಂಬು : ಸೆಪ್ಟೆಂಬರ್ 7 ರಿಂದ 9ರವರೆಗೆ 42ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ

ಬಂಟ್ವಾಳ, ಆಗಸ್ಟ್ 27, 2024 (ಕರಾವಳಿ ಟೈಮ್ಸ್) : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನರಿಕೊಂಬು, ಪಾಣೆಮಂಗಳೂರು ಇದರ ಆಶ್ರಯದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ 42ನೇ ವಾರ್ಷಿಕ ಗಣೇಶೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 7 ರಿಂದ 9ರವರೆಗೆ ಇಲ್ಲಿನ ನವಜೀವನ ವ್ಯಾಯಾಮ ಶಾಲೆಯ ಶ್ರೀ ಸತ್ಯದೇವತಾ ರಂಗಮಂದಿರದಲ್ಲಿ ನಡೆಯಲಿದೆ. 

ಸೆಪ್ಟೆಂಬರ್ 7 ರ ಶನಿವಾರ ಬೆಳಿಗ್ಗೆ 9.30ಕ್ಕೆ ಪಾಣೆಮಂಗಳೂರು ಶ್ರೀ ವೀರವಿಠಲ ದೇವಸ್ಥಾನದಿಂದ ಶ್ರೀ ಗಣೇಶನ ವಿಗ್ರಹವನ್ನು ಮೆರವಣಿಗೆಯಲ್ಲಿ ತರಲಾಗುವುದು. 10 ಗಂಟೆಗೆ ಗಣಹೋಮ, 10 ಗಂಟೆಗೆ ವೇದಮೂರ್ತಿ ಕೆ ರಾಘವೇಂದ್ರ ಮಯ್ಯ ಕೊಳಕೆ ಇವರಿಂದ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅಪರಾಹ್ನ 2 ಗಂಟೆಯಿಂದ ವಿವಿಧ ಸ್ಪರ್ಧೆಗಳು, ರಾತ್ರಿ 8 ಗಂಟೆಗೆ ಭಜನೆ, 9 ಗಂಟೆಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ರಾತ್ರಿ 9.30ಕ್ಕೆ ತುಡರ್ ರಂಗ ಅಧ್ಯಯನ ಕೇಂದ್ರ ಕಲ್ಲಡ್ಕ ಅರ್ಪಿಸುವ ತುಡರ್ ಕಲಾವಿದೆರ್ ಕಲ್ಲಡ್ಕ ಅಭಿನಯದ, ಮಧು ಬಂಗೇರ ಕಲ್ಲಡ್ಕ ಸಾರಥ್ಯದಲ್ಲಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ‘ಗಾಳಿಪಟ’ ಪರಿಸ್ಥಿತಿದೊಟ್ಟುಗು ಮನಸ್ಥಿತಿದ ರಾಪಟ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಸೆಪ್ಟೆಂಬರ್ 8 ರಂದು ಭಾನುವಾರ ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ನರಿಕೊಂಬು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ಮರ್ದೋಳಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಶ್ರೀಮತಿ ಮಲ್ಲಿಕಾ ಪಕ್ಕಳ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಮೋಹನ್ ದಾಸ್ ಕೊಟ್ಟಾರಿ, ಬಂಟ್ವಾಳ ಪಿಡಬ್ಲ್ಯುಡಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಪಾಣೆಮಂಗಳೂರು ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಪ್ರಮೋದ್ ಭಟ್, ಬಿ ಮೂಡ ಪದವಿಪೂರ್ವ ಕಾಲೇಜು ಉಪನ್ಯಾಸಕ ದಾಮೋದರ, ಉದ್ಯಮಿ, ನರಿಕೊಂಬು ಶ್ರೀ ಸತ್ಯದೇವತಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಲೋಕೇಶ್ ನರಹರಿ ಅವರು ಭಾಗವಹಿಸುವರು. 

ಸೆ 9 ರಂದು ಬೆಳಿಗ್ಗೆ 10 ಗಂಟೆಗೆ ಗಣಹೋಮ, 11 ಗಂಟೆಗೆ ಭಜನೆ, 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1 ಗಂಟೆಗೆ ಪಾಣೆಮಂಗಳೂರು ಸತ್ಯಶ್ರೀ ಕಲ್ಯಾಣ ಮಂಟಪದಲ್ಲಿ ಪಾಣೆಮಂಗಳೂರು ಸತ್ಯದೇವತಾ ಗುಡಿ ಬಳಿಯ ರಿಕ್ಷಾ ಚಾಲಕರು ಹಾಗೂ ಮಾಲಕರ ಪ್ರಾಯೋಜಕತ್ವದಲ್ಲಿ ಮಹಾ ಅನ್ನಸಂತರ್ಪಣೆ, ಅಪರಾಹ್ನ 2.30ಕ್ಕೆ ಮಹಾಪೂಜೆ, ಮಹಾಮಂಗಳಾರತಿ, ವಿಸರ್ಜನಾ ಪೂಜೆ ಬಳಿಕ ಅಪರಾಹ್ನ 3.30ರಿಂದ ಶ್ರೀ ಗಣೇಶನ ಭವ್ಯ ಶೋಭಾಯಾತ್ರೆ ಬಳಿಕ ವಿಗ್ರಹ ವಿಸರ್ಜನೆ ನಡೆಯಲಿದೆ. ಕಾರ್ಯಕ್ರಮಕ್ಕೆ ಪಾಣೆಮಂಗಳೂರು-ನರಿಕೊಂಬು ಶ್ರೀ ಸತ್ಯದೇವತಾ ಚಾರಿಟೇಬಲ್ ಟ್ರಸ್ಟ್ (ರಿ), ನರಿಕೊಂಬು ನವಜೀವನ ಗೇಮ್ಸ್ ಕ್ಲಬ್ (ರಿ) ಹಾಗೂ ಊರ ಹತ್ತು ಸಮಸ್ತರು ಸಹಕಾರ ನೀಡಲಿದ್ದಾರೆ ಎಂದು ನರಿಕೊಂಬು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ನರಿಕೊಂಬು : ಸೆಪ್ಟೆಂಬರ್ 7 ರಿಂದ 9ರವರೆಗೆ 42ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಂಭ್ರಮ Rating: 5 Reviewed By: karavali Times
Scroll to Top