ಉಡುಪಿ, ಆಗಸ್ಟ್ 07, 2024 (ಕರಾವಳಿ ಟೈಮ್ಸ್) : ತಾಲೂಕಿನ ಮಣಿಪುರ ರಹ್ಮಾನಿಯ್ಯಾ ಜುಮ್ಮಾ ಮಸೀದಿ ಅಧೀನದಲ್ಲಿರುವ ಖಲಂದರ್ ಷಾ ದಫ್ ಸಮಿತಿಯ ನೂತನ ಅಧ್ಯಕ್ಷರಾಗಿ ನಿಝಾಮುದ್ದೀನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಇರ್ಶಾದ್ ಅವರು ಆಯ್ಕೆಯಾಗಿದ್ದಾರೆ.
ಇಲ್ಲಿನ ನೂರುಲ್ ಇಸ್ಲಾಂ ಮದ್ರಸ ಸಭಾಂಗಣದಲ್ಲಿ ಮಸೀದಿ ಅಧ್ಯಕ್ಷ ರಫೀಕ್ ಕೆ ಶಾಬಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ 2024-25ನೇ ಸಾಲಿನ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಗೌರವಾಧ್ಯಕ್ಷರಾಗಿ ರಜಬ್ ಕುಂಞ ಬ್ಯಾರಿ, ಉಪಾಧ್ಯಕ್ಷರಾಗಿ ಸೈಫುಲ್ಲಾ, ಜೊತೆ ಕಾರ್ಯದರ್ಶಿಯಾಗಿ ಶಮೀರ್, ಕೋಶಾಧಿಕಾರಿಯಾಗಿ ಸಿರಾಜ್, ಉಸ್ತುವಾರಿಗಳಾಗಿ ನಿಹಾಲ್ ಮತ್ತು ಅಫ್ರಿದ್ ಅಯ್ಯುಬ್, ಸಲಹೆಗಾರರಾಗಿ ಅಬ್ದುಲ್ ರಶೀದ್, ಇಮ್ರಾನ್, ಸಲ್ಮಾನ್ ಅವರನ್ನು ಆರಿಸಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಝೀಝ್, ಅಫ್ರಿದ್, ಅನ್ಸಿಲ್, ಫಾಯಿಝ್, ತೌಸೀಫ್, ಶಾಕಿರ್, ರಾಫಿದ್, ಸಿನಾನ್ ಅವರನ್ನು ನೇಮಿಸಲಾಯಿತು.
ಸಭೆಯಲ್ಲಿ ಮಣಿಪುರ ಮಸೀದಿ ಖತೀಬ್ ಹಾಜಿ ಪಿ ಉಮರ್ ಕುಂಞ ಬದವಿ, ಕಾರ್ಯದರ್ಶಿ ಅಬ್ದುಲ್ ಶಮೀರ್, ಉಪಾಧ್ಯಕ್ಷ ರಶೀದ್, ಸದಸ್ಯ ಇಮ್ರಾನ್, ಯಂಗಮೆನ್ಸ್ ಸಮಿತಿಯ ಅಧ್ಯಕ್ಷ ಖಾಸಿಂ, ಕಾರ್ಯದರ್ಶಿ ಸಲ್ಮಾನ್ ಉಪಸ್ಥಿತರಿದ್ದರು.
0 comments:
Post a Comment