ಉಪ್ಪಿನಂಗಡಿ, ಆಗಸ್ಟ್ 10, 2024 (ಕರಾವಳಿ ಟೈಮ್ಸ್) : ಅಟೋ ರಿಕ್ಷಾದಲ್ಲಿ ಮಾದಕ ವಸ್ತು ಎಂಡಿಎಂಎ ಸಾಗಾಟ ನಡೆಸುತ್ತಿದ್ದ ಪ್ರಕರಣವನ್ನು ಬೇಧಿಸಿದ ಉಪ್ಪಿನಂಗಡಿ ಪೊಲೀಸರು ಅಟೋ ರಿಕ್ಷಾ, ಮಾದಕ ವಸ್ತು ಸಹಿತ ಮೂರು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿದ ಘಟನೆ ಪುತ್ತೂರು ತಾಲೂಕಿನ ನೆಕ್ಕಿಲಾಡಿ ಜಂಕ್ಷನ್ ಬಳಿ ಶುಕ್ರವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕು, ಕೆದಿಲ ಗ್ರಾಮದ ಗಡಿಯಾರ ನಿವಾಸಿ ಮೊಹಮ್ಮದ್ ನಾಸಿರ್ (24), ಪೆರಾಜೆ ಗ್ರಾಮದ ಬುಡೋಳಿ-ಏನಾಜೆ ನಿವಾಸಿ ಮಹಮ್ಮದ್ ಆಸಿಫ್ ಬಿ (21) ಹಾಗೂ ಸಿನಾನ್ ಎಂದು ಹೆಸರಿಸಲಾಗಿದೆ.
ಉಪ್ಪಿನಂಗಡಿ ಪೆÇಲೀಸ್ ಠಾಣಾ ಪಿಎಸ್ಸೈ ಅವಿನಾಶ್ ಎಚ್ ಅವರ ನೇತೃತ್ವದ ಪೊಲೀಸರು ಶುಕ್ರವಾರ ಬೆಳಿಗ್ಗೆ ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಸದ್ರಿ ಮಾರ್ಗವಾಗಿ ಬಂದ ಕೆಎ21 ಸಿ3003 ನೋಂದಣಿ ಸಂಖ್ಯೆಯ ಅಟೋರಿಕ್ಷಾವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ, ನಿಲ್ಲಿಸದೇ ಮುಂದಕ್ಕೆ ಚಲಾಯಿಸಿ, ವಾಹನವನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ವಾಹನದಲ್ಲಿದ್ದ ಚಾಲಕ ಮತ್ತು ಹಿಂದಿನ ಸೀಟಿನಲ್ಲಿದ್ದ ವ್ಯಕ್ತಿಯು ವಾಹನದಿಂದ ಇಳಿದು ಓಡಲು ಪ್ರಯತ್ನಿಸಿರುತ್ತಾರೆ. ಸದ್ರಿ ಆಪಾದಿತರುಗಳನ್ನು ಪೊಲೀಸರು ಹಿಡಿದು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ವಾಹನದ ದಾಖಲಾತಿಗಳನ್ನು ಹಾಗೂ ವಾಹನವನ್ನು ತಪಾಸಣೆ ನಡೆಸಿದಾಗ, ಅಟೋ ರಿಕ್ಷಾದಲ್ಲಿ ಸುಮಾರು 18,720 ರೂಪಾಯಿ ಮೌಲ್ಯದ 9.36 ಗ್ರಾಂ ನಿಷೇದಿತ ಎಂ ಡಿ ಎಂ ಎ ಮಾದಕ ವಸ್ತು ಮತ್ತು 15 ಚಿಕ್ಕ ಚಿಕ್ಕ ಪ್ಲಾಸ್ಟಿಕ್ ಕವರುಗಳು ಪತ್ತೆಯಾಗಿದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಮಾದಕ ವಸ್ತುಗಳು, ಅಟೋ ರಿಕ್ಷಾ ಹಾಗೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
0 comments:
Post a Comment