ಬಂಟ್ವಾಳ, ಆಗಸ್ಟ್ 20, 2024 (ಕರಾವಳಿ ಟೈಮ್ಸ್) : ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳದ ವತಿಯಿಂದ ಕೃಷ್ಣ ಕೃಷ್ಣ ಶ್ರೀ ಕೃಷ್ಣಾ-ಸೀಸನ್-2 ಮತ್ತು ಕುಲಾಲ ಸಮುದಾಯದ ಹೊಟೇಲ್, ಕ್ಯಾಂಟೀನ್ ಮತ್ತು ಕ್ಯಾಟರಿಂಗ್ ಉದ್ಯಮಿಗಳ ಸಮ್ಮಿಲನ ‘ಅನ್ನದಾತ ಸುಖಿನೋ ಭವಂತುಃ’ ಕಾರ್ಯಕ್ರಮ ಸೆಪ್ಟಂಬರ್ 1 ರಂದು ಬಿ ಸಿ ರೋಡಿನ ಪೆÇಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ನಡೆಯಲಿದೆ.
ಕೃಷ್ಣ ವೇಷ ಸ್ಪರ್ಧೆಯಲ್ಲಿ ಮುದ್ದುಕೃಷ್ಣ, ಬಾಲಕೃಷ್ಣ, ರಾಧಾಕೃಷ್ಣ, ಯಶೋಧ ಕೃಷ್ಣ, ಸುಧಾಮ ಕೃಷ್ಣ ಮತ್ತು ಡ್ರಾಯಿಂಗ್ ಸ್ಪರ್ಧೆ, ಆವೆ ಮಣ್ಣಿನಲ್ಲಿ ಆಕೃತಿ ರಚನಾ ಸ್ಪರ್ಧೆ ಮತ್ತು ನೃತ್ಯ ಸ್ಪರ್ಧೆಯಲ್ಲಿ ಮೊದಲ ಸುತ್ತಿನಲ್ಲಿ ಆಯ್ಕೆಯಾದ ಮಕ್ಕಳಿಂದ ಕುಲಾಲ ಡ್ಯಾನ್ಸಿಂಗ್ ಸ್ಟಾರ್ 2024-ಸೋಲೋ ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಫರಂಗಿಪೇಟೆ ಹೊಟೇಲ್ ಉದ್ಯಮಿ ಮೋಹನ ಕುಲಾಲ್, ವಗ್ಗ ಕ್ಯಾಟರಿಂಗ್ ಉದ್ಯಮಿ ಸದಾಶಿವ ಬಂಗೇರ, ಉದ್ಯಮಿ ಚಂದ್ರಹಾಸ ಪಲ್ಲಿಪಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ಕೃಷ್ಣಪ್ಪ ಬಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ ಕುಲಾಲ ಸೇವಾದಳದ ಸದಸ್ಯರಿಂದ ನೃತ್ಯ ನಿರ್ದೇಶಕ ಮಹೇಶ್ ಕುಲಾಲ್ ಕಡೇಶಿವಾಲಯ ಇವರ ನಿರ್ದೇಶನದಲ್ಲಿ ಶ್ರೀ ಕೃಷ್ಣ ಲೀಲಾಮೃತ-ವಿಭಿನ್ನ ನೃತ್ಯ ರೂಪಕ ನಡೆಯಲಿದೆ ಎಂದು ಕುಲಾಲ ಸೇವಾದಳದ ದಳಪತಿ ಗಣೇಶ್ ಕುಲಾಲ್ ಬೆದ್ರಗುಡ್ಡೆ ಮತ್ತು ಕಾರ್ಯದರ್ಶಿ ಚಂದ್ರಶೇಖರ ಕಾಮಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment