ಬಿ.ಸಿ.ರೋಡು : ಬಂಟ್ವಾಳ ತಾಲೂಕು ಮಟ್ಟದ ಶ್ರೀ ಕೃಷ್ಣ ಜಯಂತಿ ಆಚರಣೆ - Karavali Times ಬಿ.ಸಿ.ರೋಡು : ಬಂಟ್ವಾಳ ತಾಲೂಕು ಮಟ್ಟದ ಶ್ರೀ ಕೃಷ್ಣ ಜಯಂತಿ ಆಚರಣೆ - Karavali Times

728x90

26 August 2024

ಬಿ.ಸಿ.ರೋಡು : ಬಂಟ್ವಾಳ ತಾಲೂಕು ಮಟ್ಟದ ಶ್ರೀ ಕೃಷ್ಣ ಜಯಂತಿ ಆಚರಣೆ

 ಬಂಟ್ವಾಳ, ಆಗಸ್ಟ್ 22, 2024 (ಕರಾವಳಿ ಟೈಮ್ಸ್) : ಶ್ರೀಕೃಷ್ಣನದು ಜಗತ್ತೇ ವಂದಿಸುವಂತಹ ವ್ಯಕ್ತಿತ್ವ. ಮಗುವಾಗಿ, ಸ್ನೇಹಿತನಾಗಿ, ಭಗವದ್ಗೀತೆಯ ಬೋಧಕನಾಗಿ ಅವನು ನಮ್ಮೆಲ್ಲರಿಗೂ ಮಾರ್ಗದರ್ಶಕನಾಗಿದ್ದಾನೆ ಎಂದು ಬಂಟ್ವಾಳ ತಾಲೂಕು ಕಚೇರಿ ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ನರೇಂದ್ರನಾಥ ಮಿತ್ತೂರು ಹೇಳಿದರು. 

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸೋಮವಾರ ಬಿ ಸಿ ರೋಡಿನ ಮಿನಿ ವಿಧಾನಸೌಧ ಸಭಾಂಗಣದಲ್ಲಿ ನಡೆದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಬಂಟ್ವಾಳ ತಾಲೂಕು ಯಾದವ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಮಾತನಾಡಿ, ಅವತಾರ ಪುರುಷರು ಜನಿಸಿದಾಗ ಮನುಕುಲವನ್ನೇ ರಕ್ಷಣೆ ಮಾಡುತ್ತಾರೆ. ಆದರೆ ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು. ದೈವತ್ವಕ್ಕೆ ಸಂಪೂರ್ಣ ಶರಣಾಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಉಪತಹಶೀಲ್ದಾರ್ ಗಳಾದ ರಾಜೇಶ್ ನಾಯ್ಕ್ ಎನ್ ಎಂ, ದಿವಾಕರ ಮುಗುಲ್ಯ, ಕಂದಾಯ ನಿರೀಕ್ಷಕರಾದ ವಿಜಯ್ ಆರ್, ದ ಕ ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷ ಎಸ್ ಗೋಪಾಲ್, ಕೋಶಾಧಿಕಾರಿ ಚಂದ್ರಶೇಖರ್ ಅಳಿಕೆ, ತಾಲೂಕು ಯಾದವ ಸಂಘದ ಪ್ರತಿನಿಧಿಗಳು, ಕಂದಾಯ ಇಲಾಖೆಯ ಸಿಬ್ಬಂದಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಶ್ರೀಕಲಾ ಕಾರಂತ್ ಅಳಿಕೆ ಸ್ವಾಗತಿಸಿ, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಜನಾರ್ದನ ವಂದಿಸಿದರು. ಗ್ರಾಮ ಆಡಳಿತ ಅಧಿಕಾರಿ ದಿವ್ಯಾ ಪ್ರಾರ್ಥಿಸಿದರು. ಉಪತಹಶೀಲ್ದಾರ್ ನವೀನ್ ಕುಮಾರ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಬಂಟ್ವಾಳ ತಾಲೂಕು ಮಟ್ಟದ ಶ್ರೀ ಕೃಷ್ಣ ಜಯಂತಿ ಆಚರಣೆ Rating: 5 Reviewed By: karavali Times
Scroll to Top