ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಕಂಚಿಕಾರ ಪೇಟೆ ರಸ್ತೆ ದುರಸ್ತಿಪಡಿಸುವಂತೆ ಸ್ಥಳೀಯರ ಆಗ್ರಹ - Karavali Times ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಕಂಚಿಕಾರ ಪೇಟೆ ರಸ್ತೆ ದುರಸ್ತಿಪಡಿಸುವಂತೆ ಸ್ಥಳೀಯರ ಆಗ್ರಹ - Karavali Times

728x90

14 August 2024

ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಕಂಚಿಕಾರ ಪೇಟೆ ರಸ್ತೆ ದುರಸ್ತಿಪಡಿಸುವಂತೆ ಸ್ಥಳೀಯರ ಆಗ್ರಹ

ಬಂಟ್ವಾಳ, ಆಗಸ್ಟ್ 14, 2024 (ಕರಾವಳಿ ಟೈಮ್ಸ್) : ಕಳೆದ ಜುಲೈ 30 ರಂದು ತಾಲೂಕಿನಲ್ಲಿ ತಲೆದೋರಿದ್ದ ಪ್ರವಾಹದ ಸಂದರ್ಭ ನೇತ್ರಾವತಿ ನದಿ ಉಕ್ಕಿ ಹರಿದ ಪರಿಣಾಮ ಪಾಣೆಮಂಗಳೂರು, ಗೂಡಿನಬಳಿ ಪರಿಸರದಿಂದ ಬಂಟ್ವಾಳ ಬಸ್ತಿಪಡ್ಪು ಸಂರ್ಕಿಸುವ ಕಂಚಿಕಾರ ಪೇಟೆ ಎಂಬಲ್ಲಿನ ಕಿರು ರಸ್ತೆ ಕೊಚ್ಚಿ ಹೋಗಿ ಸಂಪರ್ಕವೇ ಕಡಿದು ಹೋಗಿದೆ. ಸಂಪರ್ಕ ಕಡಿತಗೊಂಡಿರುವ ಈ ರಸ್ತೆಗೆ ಶೀಘ್ರ ಕಾಯಕಲ್ಪ ಒದಗಿಸಲು ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಮನಸ್ಸು ಮಾಡಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಪಾಣೆಮಂಗಳೂರು ಪೇಟೆ ಹಾಗೂ ಗೂಡಿನಬಳಿ ಪರಿಸರದಿಂದ ಬಂಟ್ವಾಳಕ್ಕೆ ಸಂಪರ್ಕ ಸಾಧಿಸಲು ಬಹಳಷ್ಟು ಸುಲಭ ಹಾಗೂ ಹತ್ತಿರದ ರಸ್ತೆ ಇದಾಗಿದ್ದು, ಇದರಿಂದ ಸ್ಥಳೀಯರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಈ ಹಿಂದೆ ಇಲ್ಲಿನ ರಸ್ತೆ ಹಾಗೂ ಸೇತುವೆ ಸಂಪೂರ್ಣವಾಗಿ ನಾದುರಸ್ತಿಯಲ್ಲಿದ್ದ ಸಂದರ್ಭ ಸ್ಥಳೀಯರ ಅನುಕೂಲ ಮನಗಂಡು ಅಂದಿನ ಉಸ್ತುವಾರಿ ಸಚಿವರೂ, ಬಂಟ್ವಾಳ ಶಾಸಕರೂ ಆಗಿದ್ದ ಬಿ ರಮಾನಾಥ ರೈ ಅವರು ವಿಶೇಷ ಮುತುವರ್ಜಿ ವಹಿಸಿ ಕಿರು ಸೇತುವೆ ಹಾಗೂ ರಸ್ತೆ ದುರಸ್ತಿಪಡಿಸಿ ಇಲ್ಲಿನ ಜನರ ಸಂಪರ್ಕಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ಇದರಿಂದ ಇಲ್ಲಿನ ಜನ ಸುಲಭ ಸಂಪರ್ಕ ಸಾಧಿಸಲು ಸಾಧ್ಯವಾಗಿತ್ತು. 

ಇದೀಗ ಇಲ್ಲಿನ ರಸ್ತೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಈ ಪರಿಸರದಲ್ಲಿರುವ ಮನೆ ಮಂದಿ ಸಹಿತ ಸಾರ್ವಜನಿಕರು ಸದ್ಯ ಸಂಪರ್ಕ ಸಾಧಿಸಲು ಒಂದೆರಡು ಕಿಲೋ ಮೀಟರ್ ಸುತ್ತು ಬಳಸಿ ಪರ್ಯಾಯ ಮಾರ್ಗವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಮಾಜಿ ಸಚಿವರು ಈ ಬಗ್ಗೆ ಸೂಕ್ತವಾಗಿ ಸ್ಪಂದಿಸಿ ಈ ಭಾಗದ ಜನರ ಅನುಕೂಲಕ್ಕೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಕಂಚಿಕಾರ ಪೇಟೆ ರಸ್ತೆ ದುರಸ್ತಿಪಡಿಸುವಂತೆ ಸ್ಥಳೀಯರ ಆಗ್ರಹ Rating: 5 Reviewed By: karavali Times
Scroll to Top