ಸೆ. 7 ರಿಂದ 11ರವರೆಗೆ ನಡೆಯುವ 21ನೇ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಬಂಟ್ವಾಳ, ಆಗಸ್ಟ್ 29, 2024 (ಕರಾವಳಿ ಟೈಮ್ಸ್) : ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬಂಟ್ವಾಳ-ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಬಕ್ರಿಬೆಟ್ಟು ವತಿಯಿಂದ ನಡೆಯುವ 21ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆಯನ್ನು ನಾಡಹಬ್ಬವಾಗಿ ಆಚರಿಸಲು ಸಮಿತಿ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ.
ಕಳೆದ 20ವರ್ಷಗಳ ಹಿಂದೆ ನಾಡಿನ ಸಮಸ್ತ ಸದ್ಭಕ್ತರ ಸದ್ಭಾವನೆಯ ಪ್ರತಿರೂಪವಾಗಿ ಬಂಟ್ವಾಳದ ಜತ್ರಿಬೆಟ್ಟಿನಲ್ಲಿ ಆರಂಭಗೊಂಡ ಸಾರ್ವಜನಿಕ ಶ್ರೀ ಗಣೇಶೋತ್ಸವವು ಇಡೀ ನಾಡಿಗೆ ಮಾದರಿಯಾಗಿ ಸಂಪನ್ನಗೊಂಡಿದೆ. ಬಂಟ್ವಾಳದ ಗಣೇಶೋತ್ಸವವೆಂದರೆ ಒಂದು ಜಾತಿ, ಮತ, ಧರ್ಮಕ್ಕೇ ಸೀಮಿತವಾಗಿರದೆ ಎಲ್ಲರೂ ಒಂದಾಗಿ ಬೆಸೆಯುವ, ಬೆರೆಯುವ ಸೌಹಾರ್ದತೆಯ ಸಮ್ಮೇಳನವಾಗಿ ರೂಪುಗೊಂಡು “ಬಂಟ್ವಾಳದ ಹಬ್ಬ” ವಾಗಿ ಆಚರಿಸಲ್ಪಡುತ್ತಿರುವುದು ಗಮನಾರ್ಹ ಅಂಶ. ಜಾತಿ-ಜಾತಿ, ಧರ್ಮ-ಧರ್ಮಗಳ ನಡುವೆ ವಿಷಬೀಜ ಬಿತ್ತಿ ಈ ಮಣ್ಣಿನ ಸಾಮರಸ್ಯದ, ಸಹಭಾಳ್ವೆಯ ಸಹಜೀವನವನ್ನು ನಾಶ ಮಾಡಲು ಸ್ಥಾಪಿತ ಹಿತಾಸಕ್ತಿಗಳು ಹರಸಾಹಸ ಪಡುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಮನುಷ್ಯ-ಮನುಷ್ಯರ ನಡುವೆ ಸಾಮರಸ್ಯದ ಕೊಂಡಿಯೊಂದು ಬಲವಾಗಿ ಬೆಸೆಯಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ. ಈ ದೃಷ್ಟಿಯಲ್ಲಿ ಮನುಷ್ಯರೆಲ್ಲರೂ ಎಲ್ಲಾ ಭೇದಭಾವವನ್ನು ತೊರೆದು ಒಂದೇ ಸೂರಿನಡಿ ಒಂದಾಗಬೇಕೆಂಬ ಸದುದ್ದೇಶದಿಂದ ಅಂದು ಆರಂಭಿಸಿದ ಬಂಟ್ವಾಳದ ಶ್ರೀ ಗಣೇಶೋತ್ಸವ ಅತ್ಯಂತ ಅರ್ಥಪೂರ್ಣವಾಗಿ, ಆಭೂತಪೂರ್ವವಾಗಿ ಸಂಪನ್ನಗೊಳ್ಳುವಲ್ಲಿ ತಮ್ಮೆಲ್ಲರ ಸಲಹೆ, ಸಹಕಾರ, ಪೆÇ್ರೀತ್ಸಾಹ ಮಹತ್ತರವಾದುದು.
ಸಾಮಾಜಿಕ ಸಾಮರಸ್ಯವನ್ನು ಕಾಪಾಡುವಲ್ಲಿ ಬಂಟ್ವಾಳದ ಗಣೇಶೋತ್ಸವ ತನ್ನದೇ ಆದ ವಿಶೇಷ ಕೊಡುಗೆಯನ್ನು ನೀಡಿದೆ. ಮುಂದೆಯೂ ನಮ್ಮಿ ಗಣೇಶೋತ್ಸವವು ಜನಾಕರ್ಷಣೆಯ ಉತ್ಸವ ಆಗುವುದರ ಜತೆಯಲ್ಲಿ ಜನರ ಹೃನ್ಮನವನ್ನು ಗೆಲ್ಲುವ, ಭಾಂದವ್ಯವನ್ನು ಬೆಸೆಯುವ, “ಸಾಮರಸ್ಯದ ಬಂಟ್ವಾಳ” ಸ್ಥಾಪಿಸುವ ನಾಡಹಬ್ಬವಾಗಿ ರೂಪುಗೊಳ್ಳಬೇಕೆನ್ನುವುದು ನಮ್ಮೆಲ್ಲರ ಸದಾಶಯವಾಗಿದೆ.
ಬಂಟ್ವಾಳದ ಗಣೇಶೋತ್ಸವವೆಂದರೆ ಇದು ನಮ್ಮೆಲ್ಲರ ಉತ್ಸಾಹ-ಉಲ್ಲಾಸದ ಉತ್ಸವ, ಅರ್ಥಾತ್ ಬಂಟ್ವಾಳದ ಸಮಸ್ತ ಜನತೆಯ ಪಾಲಿಗೆ ಇದೊಂದು ಮಹೋತ್ಸವ ನಮ್ಮೆಲ್ಲರ ಸಕ್ರಿಯ ಸಹಭಾಗಿತ್ವದಲ್ಲಿ ಇದುವರೆಗೂ ನಮ್ಮ ಗಣೇಶೋತ್ಸವ ಅಭೂತಪೂರ್ವವಾಗಿ ರಂಗೇರಿದೆ. ಗಣೇಶೋತ್ಸವದ ಸಂಭ್ರಮದಲ್ಲಿ ಸಂಪನ್ನಗೊಂಡಿರುವ ಎಲ್ಲಾ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ವೈಭವದ ಶೋಭಾಯಾತ್ರೆಯ ಸವಿನೆನಪು ಜನಮಾನಸದ ಹೃದಯದಲ್ಲಿ ಇಂದಿಗೂ ಹಚ್ಚ ಹಸಿರಾಗಿದೆ.ಈ ಬಾರಿಯ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 7 ರಿಂದ 11ರವರೆಗೆ ವಿವಿಧ ವೈಧಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಸಂಕಲ್ಪಿಸಲಾಗಿದೆ. ಈ ಬಾರಿಯ ಉತ್ಸವವು ನಾಡಿಗೆ ಮಾದರಿಯಾಗಿ, ಅಭೂತಪೂರ್ವವಾಗಿ ಹಾಗೂ ಬಂಟ್ವಾಳದ ನಾಡಹಬ್ಬವಾಗಿ ಜನಮಾನಸದ ಹೃದಯದಲ್ಲಿ ನೆಲೆಯಾಗಬೇಕಾಗಿದೆ ಎಂದು ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಹಾಗೂ ಅಧ್ಯಕ್ಷ ಬಿ ಪದ್ಮಶೇಖರ್ ಜೈನ್ ತಿಳಿಸಿದ್ದಾರೆ.
2024 ರ 21ನೇ ವರ್ಷದ ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆಯ ಆಮಂತ್ರಣ ಪತ್ರಿಕೆಯನ್ನು ಸಮಿತಿ ಗೌರವಾಧ್ಯಕ್ಷ, ಮಾಜಿ ಸಚಿವ ಬಿ ರಮಾನಾಥ ರೈ ಅವರು ಗುರುವಾರ ಬಿಡುಗಡೆಗೊಳಿಸಿದರು.
ಈ ಸಂದರ್ಭ ಸಮಿತಿ ಅಧ್ಯಕ್ಷ ಬಿ ಪದ್ಮಶೇಖರ್ ಜೈನ್, ಪ್ರಮುಖರಾದ ಸುದೀಪ್ ಕುಮಾರ್ ಶೆಟ್ಟಿ, ಬಾಲಕೃಷ್ಣ ಅಂಚನ್, ಚಂದ್ರಶೇಖರ್ ಭಂಡಾರಿ, ಸುಧಾಕರ್ ಶಣೈ, ಶೈಲೇಶ್ ಕುಚ್ಚಿಗುಡ್ಡೆ, ವಿಶ್ವನಾಥ್ ಗೌಡ ಮಣಿ, ರಝಾಕ್ ನೀರಪಾದೆ, ಪಿರ್ಯಗುತ್ತು, ಸತೀಶ್ ಪೂಜಾರಿ ಪಣೆಕಲ, ಡೆಂಝಿಲ್ ಹರ್ಮನ್ ನೊರೊನ್ಹಾ, ದೀಕ್ಷಿತ್ ಕುಲಾಲ್ ಹೆಬ್ರಿ, ಶ್ರೀಹರಿ ಪಾಣಾಜೆ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment