ಉಳ್ಳಾಲ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ತಾಲೂಕಿನ ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯದ ವತಿಯಿಂದ ದೇಶದ 78ನೇ ಸ್ವಾತಂತ್ರ್ಯೊತ್ಸವವನ್ನು ಗುರುವಾರ ಆಚರಿಸಲಾಯಿತು.
ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಅಶ್ರಫ್ ಧ್ವಜಾರೋಹಣಗೈದರು. ಮನ್ಸೂರ್ ಅಹ್ಮದ್ ಟಿ.ಎಸ್ ಸ್ವಾಗತಿಸಿ ಪ್ರಸ್ತಾವನೆಗೈದರು. ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯದ ಆಡಳಿತ ಸಮಿತಿ ಅಧ್ಯಕ್ಷ ಸಾಜಿದ್ ಇಬ್ರಾಹಿಂ, ಕೋಶಾಧಿಕಾರಿ ರಾಘವೇಂದ್ರ, ಶಶಿ ಕುಮಾರ್, ನಾಸಿರ್ ಆಲ್ಫಾ, ರೆಹಮತ್ ಸಾಗರ್, ಸಿದ್ದೀಕ್ ಸ್ಕೈ, ಟಿ.ಕೆ ಸಲೀಂ ಫರಂಗಿಪೇಟೆ, ಸಿದ್ದೀಕ್ ಯು.ಚ್, ಮೊಯಿದಿನ್ ಜೊಕಟ್ಟೆ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಸಿಬ್ಬಂದಿಗಳಾದ ಮೊಹಮ್ಮದ್ ಸಲೀಂ, ಆಸಿಫ್, ಗೀತಾ ಅವರನ್ನು ಗೌರವಿಸಲಾಯಿತು. ಅಫ್ಜಲ್ ಪಿಲಾರ್ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment