ಬಂಟ್ವಾಳ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ವಿಟ್ಲ ಕಸಬಾ ಗ್ರಾಮದ ನೆಲ್ಲಿಗುಡ್ಡೆ ನೂರುಲ್ ಹುದಾ ಮದ್ರಸಾ ಮತ್ತು ಮಸೀದಿ ಕಮಿಟಿ ವತಿಯಿಂದ ದೇಶದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ ಗುರುವಾರ ಇಲ್ಲಿನ ಮದ್ರಸ ವಠಾರದಲ್ಲಿ ಆಚರಿಸಲಾಯಿತು.
ಮದ್ರಸ ಸಮಿತಿ ಅಧ್ಯಕ್ಷ ಪಿ ಅಬೂಬಕ್ಕರ್ ಧ್ವಜಾರೋಹಣಗೈದರು. ಮಸೀದಿ ಖತೀಬ್ ಹುಸೈಸ ಸಖಾಫಿ ಸಂದೇಶ ನೀಡಿದರು. ಮದ್ರಸ ಮುಖ್ಯ ಶಿಕ್ಷಕ ಹುಸೈನ್ ಸಯ್ಯದಿ ಕುಕ್ಕಿಲ ಸ್ವಾಗತಿಸಿ, ಮದ್ರಸ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್ ಮುಶ್ತಾಕ್ ಬೇಗ್ ವಂದಿಸಿದರು. ಕಾರ್ಯಕ್ರಮದಲ್ಲಿ ಆಡಳಿತ ಸಮಿತಿ ಸದಸ್ಯರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.
0 comments:
Post a Comment