ಬಂಟ್ವಾಳ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.
ಶಾಲಾಡಳಿತ ಸಮಿತಿ ಅಧ್ಯಕ್ಷ ಬಶೀರುದ್ದೀನ್ ಅನ್ವರ್ ಧ್ವಜಾರೋಹಣಗೈದರು. ಶಾಲಾ ಸಂಚಾಲಕ ಹಮೀದ್ ಬಾವುಞÂ, ಇ.ಕೆ ಹುಸೈನ್, ಶಾಲಾ ಮುಖ್ಯೋಪಾಧ್ಯಾಯ ಹಮೀದ್ ಕೆ, ಸಹಾಯಕ ಮುಖ್ಯೋಪಾಧ್ಯಾಯ ನೂರುದ್ದೀನ್ ಜಿ.ಎಂ, ಸಹ ಶಿಕ್ಷಕ ಧನೇಶ್ವರ ಎ, ದೈಹಿಕ ಶಿಕ್ಷಕ ರಾಧಾಕೃಷ್ಣ ನಾಯಕ್, ಗೌರವ ಶಿಕ್ಷಕಿಯರಾದ ಆಯಿಷಾ ಸುನೈನಾ, ನೌರೀನ್ ಹಲೀಮ, ಕಮರುನ್ನೀಸ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಊರ ನಾಗರಿಕರು ಭಾಗವಹಿಸಿದ್ದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
0 comments:
Post a Comment