ಬಂಟ್ವಾಳ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು-ನೆಹರು ನಗರದ ಅಂಗನವಾಡಿ ಕೇಂದ್ರ ಹಾಗೂ ಆಜಾದ್ ಫ್ರೆಂಡ್ಸ್ ಸರ್ಕಲ್ ನೆಹರುನಗರ ಇವುಗಳ ವತಿಯಿಂದ ಜಂಟಿಯಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಉದ್ಯಮಿ ಪಿ ಎಸ್ ಅಬ್ದುಲ್ ಹಮೀದ್ ಧ್ವಜಾರೋಹಣಗೈದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನೆಹರುನಗರ ಅಂಗನವಾಡಿ ಶಿಕ್ಷಕಿ, ಆಶಾ ಕಾರ್ಯಕರ್ತೆಯರು, ನರಿಕೊಂಬು ಪಂಚಾಯತ್ ಸದಸ್ಯರುಗಳಾದ ಜುಬೈದ, ಮುಮ್ತಾಜ್, ಆಜಾದ್ ಫ್ರೆಂಡ್ಸ್ ಸರ್ಕಲ್ ಕಾರ್ಯದರ್ಶಿ ಅಬ್ದುಲ್ ಖಾದರ್, ಸಮಿತಿ ಸದಸ್ಯರುಗಳು, ಊರ ನಾಗರೀಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
0 comments:
Post a Comment