ಬಂಟ್ವಾಳ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ಬೋಳಂಗಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಬುಶ್ರಾ ಸಲಾಂ ಧ್ವಜಾರೋಹಣಗೈದರು. ಪುರಸಭಾ ಸದಸ್ಯೆ ಗಾಯತ್ರಿ ಪ್ರಕಾಶ್, ಉಧ್ಯಮಿಗಳಾದ ಎಂ.ಎನ್. ಕುಮಾರ್, ಎಂ ಎಚ್ ಮುಸ್ತಫಾ, ಪತ್ರಕರ್ತ ಸಲೀಂ ಬೋಳಂಗಡಿ, ಪುರಸಭಾ ಮಾಜಿ ಸದಸ್ಯೆ ವಸಂತಿ ಗಂಗಾದರ್, ಮೆಲ್ಕಾರ್ ಯುವಸಂಗಮದ ಅಧ್ಕಕ್ಷ ಸತೀಶ್ ಮೊದಲಾದವರು ಭಾಗವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕ ಶ್ರೀಧರ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿಯರಾದ ಅಸ್ಮಾ ವಂದಿಸಿ, ರೇಣುಕಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಧ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
0 comments:
Post a Comment