ಬಂಟ್ವಾಳ, ಆಗಸ್ಟ್ 15, 2024 (ಕರಾವಳಿ ಟೈಮ್ಸ್) : ಮೆಲ್ಕಾರ್ ಸಮೀಪದ ಬೋಗೋಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ದೇಶದ 78ನೇ ಸ್ವಾತಂತ್ರ್ಯೋತ್ಸವ ಆಚರಣೆ ಗುರುವಾರ ನಡೆಯಿತು.
ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಧ್ವಜಾರೋಹಣಗೈದರು. ಗುಡ್ಡೆಅಂಗಡಿ ಜುಮಾ ಮಸೀದಿ ಖತೀಬ್ ಅಸ್ವೀಪ್ ದಾರಿಮಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಶಾಲಾ ಮುಖ್ಯ ಶಿಕ್ಷಕ ವೆಂಕಟರಾವ್, ಶಿಕ್ಷಕಿ ವಿನ್ನಿಫ್ರೆಡ್ ಟೀಚರ್, ಮುಹಮ್ಮದ್ ಸಾದಿಕ್, ಮುಹಮ್ಮದ್ ರಫೀಕ್, ಮಯ್ಯದ್ದಿ ಬೋಗೋಡಿ, ಮುಸ್ತಫಾ ಕತಾರ್, ಸಾದಿಕ್ ಮದೀನಾ, ಸಿದ್ದೀಕ್ ಹೋಟೆಲ್, ಮಜೀದ್ ಬೋಗೋಡಿ, ಅಬ್ದುಲ್ ಖಾದರ್ ಗುಡ್ಡೆಅಂಗಡಿ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment