ಬಂಟ್ವಾಳ, ಆಗಸ್ಟ್ 12, 2024 (ಕರಾವಳಿ ಟೈಮ್ಸ್) : ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ವಿಟ್ಲ ನಾಡಕಚೇರಿ ಬಳಿ ನಡೆದಿದೆ.
ಗಾಯಗೊಂಡ ದ್ವಿಚಕ್ರ ವಾಹನ ಸವಾರನನ್ನು ವೀರಕಂಭ ನಿವಾಸಿ ಉಮೇಶ್ (38) ಎಂದು ಹೆಸರಿಸಲಾಗಿದೆ. ಉಮೇಶ್ ಅವರು ತನ್ನ ದ್ವಿಚಕ್ರ ವಾಹನದಲ್ಲಿ ವಿಟ್ಲ-ಸಾಲೆತ್ತೂರು ಮಾರ್ಗವಾಗಿ ವಿಟ್ಲ ಕಡೆಗೆ ಬರುತ್ತಿದ್ದ ವೇಳೆ ವಿಟ್ಲ ನಾಡ ಕಚೇರಿ ಬಳಿ ಸಾಲೆತ್ತೂರು ಕಡೆಯಿಂದ ಬಂದ ಕಾರು ಚಾಲಕ ಹಿಂದಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಗಾಯಗೊಂಡ ದ್ವಿಚಕ್ರ ವಾಹನ ಸವಾರ ಉಮೇಶ್ ಅವರನ್ನು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment