ಬಂಟ್ವಾಳ, ಆಗಸ್ಟ್ 21, 2024 (ಕರಾವಳಿ ಟೈಮ್ಸ್) : ಬೀದಿ ಬದಿ ವ್ಯಾಪಾರದ ಅಂಗಡಿಗೆ ಇಕೋ ಕಾರು ನುಗ್ಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದ ಘಟನೆ ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ಸಂಭವಿಸಿದೆ.
ಈ ಬಗ್ಗೆ ವಿಟ್ಲ ಕಸಬಾ ನಿವಾಸಿ ಯೋಗೀಶ್ ಶೆಟ್ಟಿ (43) ಅವರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ಇವರ ಪತ್ನಿ ವಿಜಯ ಅವರು ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ಕಲ್ಲಡ್ಕ-ಸಾರಡ್ಕ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಪರವಾಣಿಗೆ ಹೊಂದಿದ ಬೀದಿ ಬದಿ ವ್ಯಾಪಾರದ ಅಂಗಡಿಯನ್ನು ನಡೆಸುತ್ತಿದ್ದಾರೆ. ಆಗಸ್ಟ್ 15 ರಂದು ರಾತ್ರಿ ವಿಜಯ ಅವರು ಅಂಗಡಿಯನ್ನು ಶುಚಿಗೊಳಿಸುತ್ತಿರುವಾಗ ರಂಜಿತ್ ಎಂಬವರು ಉಕ್ಕುಡ ಕಡೆಯಿಂದ ಎರಡು ಜನ ಪ್ರಯಾಣಿಕರನ್ನು ಕುಳ್ಳಿರಿಸಿ ಚಲಾಯಿಸಿಕೊಂಡು ಬಂದ ಇಕೊ ಕಾರು ಅಂಗಡಿಗೆ ನುಗ್ಗಿದೆ. ಪರಿಣಾಮ ಅಂಗಡಿಯಲ್ಲಿದ್ದ ಸುಮಾರು 50 ಸಾವಿರ ರೂಪಾಯಿ ಮೌಲ್ಯದ ಕಬ್ಬು ಜ್ಯೂಸ್ ಮಾಡುವ ಯಂತ್ರ, 25 ಸಾವಿರ ರೂಪಾಯಿ ಮೌಲ್ಯದ ಕಬ್ಬಿಣದ ಟೇಬಲ್ ಹಾಗೂ ಸುಮಾರು 6 ಸಾವಿರ ರೂಪಾಯಿ ಮೌಲ್ಯದ ಅಂಗಡಿಯಲ್ಲಿ ಮಾರಾಟಕ್ಕೆ ತಂದಿರಿಸಿದ್ದ ಹಣ್ಣು ಹಂಪಲುಗಳಿಗೆ ಹಾನಿಯಾಗಿ ನಷ್ಟ ಉಂಟಾಗಿರುತ್ತದೆ. ಘಟನೆಯಿಂದ ಕಾರು ಚಾಲಕ ರಂಜಿತ್ ಅವರ ತಲೆಗೆ ಗಾಯವಾಗಿದೆ. ಅವರನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment