ಬಂಟ್ವಾಳ, ಆಗಸ್ಟ್ 22, 2024 (ಕರಾವಳಿ ಟೈಮ್ಸ್) : ಕೆ ಎಸ್ ಆರ್ ಟಿ ಸಿ ಬಸ್ಸಿನ ಮುಂಬಾಗಿಲಿನಿಂದ ಬಿದ್ದು ಮಹಿಳೆಯೋರ್ವರು ಗಾಯಗೊಂಡ ಘಟನೆ ತಾಲೂಕಿನ ಪೆರ್ನೆ ಎಂಬಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಗೀತಾ (60) ಎಂದು ಹೆಸರಿಸಲಾಗಿದೆ. ಇವರು ಉಪ್ಪಿನಂಗಡಿ ಕಡೆಯಿಂದ ಮಾಣಿ ಕಡೆಗೆ ಸಂಚರಿಸುತ್ತಿದ್ದ ಕೆಎ57 ಎಫ್1297 ನೋಂದಣಿ ಸಂಖ್ಯೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪೆರ್ನೆ ಎಂಬಲ್ಲಿ ಬಸ್ಸಿನ ಮುಂಬಾಗಿಲ ಮೂಲಕ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ತಕ್ಷಣ ಇವರನ್ನು ಸ್ಥಳೀಯರು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಪೆರ್ನೆ ನಿವಾಸಿ ಅಶ್ರಫ್ ಪಿ ಎಂಬವರು ನೀಡಿದ ದೂರಿನಂತೆ ಬಸ್ ಚಾಲಕ ಅರ್ಜುನ್ ಹಾಗೂ ನಿರ್ವಾಹಕ ಮಂಜುನಾಥ್ ಅವರ ವಿರುದ್ದ ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment