ಬೆಳ್ತಂಗಡಿ, ಆಗಸ್ಟ್ 14, 2024 (ಕರಾವಳಿ ಟೈಮ್ಸ್) : ಪಾದಚಾರಿ ಮಹಿಳೆಗೆ ಬೈಕ್ ಡಿಕ್ಕಿಯಾಗಿ ಪಾದಚಾರಿ ಸಹಿತ ಬೈಕ್ ಸವಾರರು ಗಾಯಗೊಂಡ ಘಟನೆ ಮುಂಡಾಜೆ ಗರಾಮದ ದೇವಿಗುಡಿ ಎಂಬಲ್ಲಿ ಆಗಸ್ಟ್ 12 ರಂದು ಸಂಭವಿಸಿದೆ.
ಗಾಯಗೊಂಡ ಪಾದಚಾರಿ ಮಹಿಳೆಯನ್ನು ಅವ್ವಕ್ಕ (78) ಹಾಗೂ ಬೈಕ್ ಸವಾರ ಮೋಹನ (24), ಸಹಸವಾರಿಣಿ ಮೋಹಿನಿ (55) ಎಂದು ಹೆಸರಿಸಲಾಗಿದೆ.
ಮೋಹನ ಸವಾರರಾಗಿ ಮೋಹಿನಿ ಸಹಸವಾರರಾಗಿ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ದೇವಿಗುಡಿ ಎಂಬಲ್ಲಿ ಪಾದಚಾರಿ ಅವ್ವಕ್ಕ ಅವರಿಗೆ ಡಿಕ್ಕಿಯಾಗಿ ಬೈಕ್ ಸವಾರರು ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಪಾದಚಾರಿ ಅವ್ವಕ್ಕ ಕೂಡಾ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಉಜಿರೆಯ ಎಸ್ ಡಿ ಎಂ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment