ಜಾರಿ ಬಿದ್ದು ಕಾಲಿಗೆ, ಸೊಂಟಕ್ಕೆ ಗಾಯ ಮಾಡಿಕೊಂಡ ಬಂಟ್ವಾಳ ಶಾಸಕ : ನಾಲ್ಕು ವಾರ ವಿಶ್ರಾಂತಿಗೆ ವೈದ್ಯರ ಸೂಚನೆ - Karavali Times ಜಾರಿ ಬಿದ್ದು ಕಾಲಿಗೆ, ಸೊಂಟಕ್ಕೆ ಗಾಯ ಮಾಡಿಕೊಂಡ ಬಂಟ್ವಾಳ ಶಾಸಕ : ನಾಲ್ಕು ವಾರ ವಿಶ್ರಾಂತಿಗೆ ವೈದ್ಯರ ಸೂಚನೆ - Karavali Times

728x90

2 August 2024

ಜಾರಿ ಬಿದ್ದು ಕಾಲಿಗೆ, ಸೊಂಟಕ್ಕೆ ಗಾಯ ಮಾಡಿಕೊಂಡ ಬಂಟ್ವಾಳ ಶಾಸಕ : ನಾಲ್ಕು ವಾರ ವಿಶ್ರಾಂತಿಗೆ ವೈದ್ಯರ ಸೂಚನೆ

ಬಂಟ್ವಾಳ, ಆಗಸ್ಟ್ 02, 2024 (ಕರಾವಳಿ ಟೈಮ್ಸ್) : ಜಾರಿ ಬಿದ್ದು  ಕಾಲು ಹಾಗೂ ಸೊಂಟದ ಭಾಗಕ್ಕೆ  ಗಾಯವಾಗಿರುವುದರಿಂದ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರಿಗೆ ನಾಲ್ಕು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಶಾಸಕರ ಕ್ಷೇತ್ರ ಪ್ರವಾಸವನ್ನು ರದ್ದುಪಡಿಸಲಾಗಿದೆ. 

ಪಾಕೃತಿಕ ವಿಕೋಪದಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಬಿಜೆಪಿ ವಿಪಕ್ಷ ನಾಯಕ ಆರ್ ಆಶೋಕ್ ಅವರು ಬಂಟ್ವಾಳಕ್ಕೆ ಆಗಮಿಸಿದ ದಿನದಂದು ಬೆಳಿಗ್ಗೆ ಶಾಸಕ ರಾಜೇಶ್ ನಾಯ್ಕ್ ಅವರು ಬಿದ್ದು ಕಾಲಿಗೆ ಹಾಗೂ ಸೊಂಟಕ್ಕೆ ಗಾಯವಾಗಿತ್ತು. ಅದೇ ದಿನ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸಲಹೆಯಂತೆ ಕಾಲಿನ ಬೆರಳಿಗೆ ಹೊಲಿಗೆ ಹಾಕಲಾಗಿತ್ತು. ಬಿಜೆಪಿ ವತಿಯಿಂದ ನಡೆಯುವ ಪಾದಾಯಾತ್ರೆ ವಿಚಾರವಾಗಿ ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಶಾಸಕರಿಗೆ ಕಾಲಿನ ನೋವು ಉಲ್ಬಣಗೊಂಡ ಹಿನ್ನಲೆಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಕಾಲಿನಲ್ಲಿ ಬಿರುಕು ಇರುವ ಬಗ್ಗೆ ವೈದ್ಯರು ತಿಳಿಸಿದ್ದಲ್ಲದೆ, ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಿದ್ದರು.

ವೈದ್ಯರ ಸಲಹೆಯ ಮೇರೆಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಎಕ್ಸರೇ ನಡೆಸಿದ ಮೂಲೆ ತಜ್ಞ ಡಾ ಅಜಿತ್ ಕುಮಾರ್ ರೈ ಅವರು ಕಾಲಿನ ಬಿರಕು ಬಗ್ಗೆ ಮಾಹಿತಿ ನೀಡಿ ಮುಂದಿನ ನಾಲ್ಕು ವಾರಗಳ ಕಾಲ ನಡೆದಾಡದೆ ವಿಶ್ರಾಂತಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಅನಾರೋಗ್ಯದ ಕಾರಣದಿಂದ  ಮುಂದಿನ ನಾಲ್ಕು ವಾರಗಳ ಕಾಲ ಶಾಸಕರು ಸಾರ್ವಜನಿಕರ ಸಂಪರ್ಕಕ್ಕೆ ಸಿಗಲು ಕಷ್ಟಸಾಧ್ಯ ಎಂದು ಕಚೇರಿ ಮೂಲಗಳು ತಿಳಿಸಿವೆ. ಸಾರ್ವಜನಿಕರು ಅಗತ್ಯ ಕೆಲಸಗಳಿಗೆ ಪೆÇೀನ್ ಮೂಲಕ ಸಂಪರ್ಕ ಮಾಡುವಂತೆ ಅಥವಾ ಶಾಸಕರ ಕಚೇರಿಯನ್ನು ಸಂಪರ್ಕ ಮಾಡಲು ಕೋರಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಜಾರಿ ಬಿದ್ದು ಕಾಲಿಗೆ, ಸೊಂಟಕ್ಕೆ ಗಾಯ ಮಾಡಿಕೊಂಡ ಬಂಟ್ವಾಳ ಶಾಸಕ : ನಾಲ್ಕು ವಾರ ವಿಶ್ರಾಂತಿಗೆ ವೈದ್ಯರ ಸೂಚನೆ Rating: 5 Reviewed By: karavali Times
Scroll to Top