ಬಂಟ್ವಾಳ, ಆಗಸ್ಟ್ 01, 2024 (ಕರಾವಳಿ ಟೈಮ್ಸ್) : ಪಲ್ಗುಣಿ ನದಿಯಲ್ಲಿ ಗುರುವಾರ ಮುಂಜಾನೆ ಹಠಾತ್ ನೀರಿನ ಮಟ್ಟ ಏರಿಕೆಯಾಗಿ 8 ಕುಟುಂಬಗಳನ್ನು ಸ್ಥಳಾಂತರಿಸಿದ ಘಟನೆ ಕಳ್ಳಿಗೆ ಗ್ರಾಮದ ಅಮ್ಮುಂಜೆಯಲ್ಲಿ ಸಂಭವಿಸಿದೆ.
ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ಅವರು ಕಂದಾಯ ಇಲಾಖಾ ಸಿಬ್ಬಂದಿಗಳು ಅಗ್ನಿಶಾಮಕ ಹಾಗೂ ಮೆಸ್ಕಾಂ ಇಲಾಖಾ ಸಿಬ್ಬಂದಿಗಳ ನೆರವು ಪಡೆದು ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
ಸಂತ್ರಸ್ತ ಕುಟುಂಬಗಳನ್ನು ಪೊಳಲಿ ದೇವಸ್ಥಾನದ ಸಭಾಂಗಣದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿರುವ ತಹಶೀಲ್ದಾರ್ ನೀರಿನಲ್ಲಿ ಕಸದ ರಾಶಿಗಳು ಹರಿದು ಬಂದ ಪರಿಣಾಮ ರಕ್ಷಣಾ ಕಾರ್ಯ ಸ್ವಲ್ಪ ವಿಳಂಬವಾಗಿತ್ತು. ಅಗ್ನಿಶಾಮಕ ಇಲಾಖೆಯ ಬೋಟ್ ಬಳಸಿ ಕಸದ ರಾಶಿಯನ್ನು ವಿಲೇವಾರಿಗೊಳಿಸಿ, ಮೆಸ್ಕಾಂ ಇಲಾಖೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬಳಿಕ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಕಾಲಿಕ ಸಮನ್ವಯತೆಯಿಂದ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ ಎಂದಿದ್ದಾರೆ.
0 comments:
Post a Comment