ಬಂಟ್ವಾಳ, ಆಗಸ್ಟ್ 31, 2024 (ಕರಾವಳಿ ಟೈಮ್ಸ್) : ಕೃಷಿಕರಿಗೆ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸಲು ಅನುಕೂಲವಾಗುವಂತೆ ಕೃಷಿ ಜಮೀನು ಪಹಣಿ ಪತ್ರಿಕೆಗೆ ಆಧಾರ ಸೀಡಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಕೃಷಿ ಜಮೀನು ಹೊಂದಿರುವ ಎಲ್ಲಾ ರೈತರೂ ತಮ್ಮ ಆರ್ ಟಿ ಸಿ ಗೆ ಸೆ 8ರೊಳಗೆ ತಮ್ಮ ಗ್ರಾಮದ ಆಡಳಿತಾಧಿಕಾರಿಗಳನ್ನು ಭೇಟಿಯಾಗಿ ಆಧಾರ್ ಸೀಡಿಂಗ್ ಮಾಡುವಂತೆ ಬಂಟ್ವಾಳ ತಾಲೂಕು ತಹಶೀಲ್ದಾರರು ತಿಳಿಸಿದ್ದಾರೆ.
ತಾಲೂಕಿನಲ್ಲಿ ಕೃಷಿ ಭೂಮಿಯ ಪಹಣಿ ಪತ್ರಿಕೆಗಳಿಗೆ ಆಧಾರ್ ಸೀಡಿಂಗ್ ಮಾಡುವ ಬಗ್ಗೆ ಒಂದು ವಾರಗಳ ಕಾಲ ಆಂದೋಲನ ಹಮ್ಮಿಕೊಳ್ಳಲಾಗಿದೆ. ಸೆ 8ರೊಳಗೆ ಎಲ್ಲ ಕೃಷಿ ಜಮೀನಿ ಹೊಂದಿದ ರೈತರು ತಮ್ಮ ಆಧಾರ್ ಕಾರ್ಡ್, ಪಹಣಿ ಪತ್ರಿಕೆ ಹಾಗೂ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯೊಂದಿಗೆ ಸಂಬಂಧಪಟ್ಟ ಗ್ರಾಮದ ಆಡಳಿತಾಧಿಕಾರಿಗಳನ್ನು ಸಂಪರ್ಕಿಸುವುದು. ಜಂಟಿ ಖಾತೆದಾರರಾಗಿದ್ದಲ್ಲಿ ಎಲ್ಲ ಖಾತೆದಾರರ ಆಧಾರ್ ಕಾರ್ಡ್ ಕೊಂಡೊಯ್ಯುವುದು ಕಡ್ಡಾಯವಾಗಿದೆ ಎಂದು ತಹಶೀಲ್ದಾರ್ ಅರ್ಚನಾ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment