ಬಂಟ್ವಾಳ, ಜುಲೈ 11, 2024 (ಕರಾವಳಿ ಟೈಮ್ಸ್) : ಟೆಲಿಗ್ರಾಂ ಆಪ್ ಮೂಲಕ ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಬಂಟ್ವಾಳದ ಮಹಿಳೆಯೋರ್ವರಿಗೆ ಟ್ರೇಡಿಂಗ್ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆಗೆ 2023 ರ ಡಿಸೆಂಬರ್ 15 ರಂದು ಟೆಲಿಗ್ರಾಂ ಮೂಲಕ ಅಮನ್ ಗೊಂಡ ಎಂಬುದಾಗಿ ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಟ್ರೇಡಿಂಗ್ ಮಾರುಕಟ್ಟೆಯಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂಬುದಾಗಿ ತಿಳಿಸಿರುತ್ತಾನೆ. ಅದರಂತೆ ಮಹಿಳೆ ಏಜೆಂಟ್ ಕೆನ್ ಎಂದು ತನ್ನನ್ನು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಸೂಚಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಒಟ್ಟು 10 ಲಕ್ಷ ರೂಪಾಯಿ ಹಣವನ್ನು ತನ್ನ ಬ್ಯಾಂಕ್ ಖಾತೆಯಿಂದ ವರ್ಗಾಯಿಸಿರುತ್ತಾರೆ. ಸದ್ರಿ ಹಣವನ್ನು ಹಿಂತಿರುಗಿಸದೇ, ಮೋಸದ ಜಾಲತಾಣದ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಿರುತ್ತಾರೆ ಎಂಬುದಾಗಿ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2024 ಕಲಂ 66(ಸಿ), 66(ಡಿ) ಐಟಿ ಕಾಯ್ದೆ ಹಾಗೂ ಕಲಂ 419, 420 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
0 comments:
Post a Comment