ಫರಂಗಿಪೇಟೆ : ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಅಟೋ ರಿಕ್ಷಾ ಹೊಡೆದು ಗಾಯ - Karavali Times ಫರಂಗಿಪೇಟೆ : ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಅಟೋ ರಿಕ್ಷಾ ಹೊಡೆದು ಗಾಯ - Karavali Times

728x90

26 July 2024

ಫರಂಗಿಪೇಟೆ : ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಅಟೋ ರಿಕ್ಷಾ ಹೊಡೆದು ಗಾಯ

ಬಂಟ್ವಾಳ, ಜುಲೈ 26, 2024 (ಕರಾವಳಿ ಟೈಮ್ಸ್) : ಅಟೋ ರಿಕ್ಷಾ ಡಿಕ್ಕಿ ಹೊಡೆದು ರಸ್ತೆ ದಾಟಲು ನಿಂತಿದ್ದ ಮಹಿಳೆಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಫರಂಗಿಪೇಯಲ್ಲಿ ಸಂಭವಿಸಿದೆ. 

ಗಾಯಗೊಂಡ ಪಾದಚಾರಿ ಮಹಿಳೆಯನ್ನು ಮೂಲತಃ ಕೇರಳ ರಾಜ್ಯದ ಕಣ್ಣೂರು ಜಿಲ್ಲೆ, ನೆಂಬುಡಚ್ಚಾಲ್-ಇರಿಟ್ಟಿ ನಿವಾಸಿ, ಪ್ರಸ್ತುತ ಪಡೀಲ್-ವಿಜಯ ನಗರದಲ್ಲಿ ವಾಸವಾಗಿರುವ ಶ್ರೀಮತಿ ವಿಸ್ಮಯ ಸಿ ಎಂ (28) ಎಂದು ಹೆಸರಿಸಲಾಗಿದೆ. 

ಇವರು ಫರಂಗಿಪೇಟೆ ಸೇವಾಂಜಲಿ ಹಾಲ್ ಎದರು ರಸ್ತೆ ದಾಟಲು ನಿಂತಿದ್ದ ವೇಳೆ ಯಾಸಿರ್ ಎಂಬವರು ಚಲಾಯಿಸಿಕೊಂಡು ಬಂದ ಅಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಗಾಯಗೊಂಢ ವಿಸ್ಮಯ ಅವರನ್ನು ಸ್ಥಳೀಯರು ತಕ್ಷಣ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ : ರಸ್ತೆ ದಾಟಲು ನಿಂತಿದ್ದ ಮಹಿಳೆಗೆ ಅಟೋ ರಿಕ್ಷಾ ಹೊಡೆದು ಗಾಯ Rating: 5 Reviewed By: karavali Times
Scroll to Top