ಬಂಟ್ವಾಳ, ಜುಲೈ 25, 2024 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಅಬ್ಬರ ಮುಂದುವರಿದAತೆ ಮಳೆ ಹಾನಿ ಪ್ರಕರಣಗಳೂ ಮುಂದುವರಿದಿದೆ. ಕಡೇಶಿವಾಲಯ ಗ್ರಾಮದ ನಿವಾಸಿ ವನಿತ ಬಿ ರೈ ಮತ್ತು ಎನ್ ವೀರಪ್ಪ ನಾಯ್ಕ ಅವರ ತೋಟದ ಸುಮಾರು 600 ಫಲ ಬರುವ ಅಡಿಕೆ ಮರ ಹಾಗೂ ತೆಂಗಿನ ಮರಗಳು ಬಿದ್ದು ಹಾನಿಯಾಗಿದೆ. ಮಾಣಿಲ ಗ್ರಾಮದ ದಂಡೆಪ್ಪಾಡಿ ನಿವಾಸಿ ರಾಮ ಮೂಲ್ಯ ಬಿನ್ ಮುತ್ತ ಮೂಲ್ಯ ಅವರ ಮನೆ, ಕೊಟ್ಟಿಗೆಗೆ ತೆಂಗಿನ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ. ಇಡ್ಕಿದು ಗ್ರಾಮದ ಮಿತ್ತೂರು ನಿವಾಸಿ ಜಾನಕಿ ಕೋಂ ಜನಾರ್ದನ ಅವರ ಮನೆಗೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಪುಣಚ ಗ್ರಾಮದ ಬೇರಿಕೆ ನಿವಾಸಿ ನಾರಾಯಣ ನಾಯ್ಕ ಅವರ ಮನೆಯ ಹಟ್ಟಿ ಕೊಟ್ಟಿಗೆಗೆ ಹಾನಿಯಾಗಿದೆ.
ಇಡ್ಕಿದು ಗ್ರಾಮದ ಮೈಕೆ ಮನೆ ನಿವಾಸಿ ಅಬ್ದುಲ್ ರಹಿಮಾನ್ ಬಿನ್ ಮಮ್ಮದೆ ಬ್ಯಾರಿ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಬಿ ಮೂಡ ಗ್ರಾಮದ ಮೊಡಂಕಾಪು ನಿವಾಸಿ ದಿನೇಶ ಬಿನ್ ಕೆ ನೇಮು ಅವರ ವಾಸದ ಮನೆಯ ಗೋಡೆ ಕುಸಿದಿದೆ. ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ನಿವಾಸಿ ಇಸ್ಮಾಯಿಲ್ ಮದನಿ ಅವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ.
0 comments:
Post a Comment