ಬೆಳ್ಳಾರೆ, ಜುಲೈ 17, 2024 (ಕರಾವಳಿ ಟೈಮ್ಸ್) : ಹೂಡಿಕೆ ಇಲ್ಲದೆ ಮನೆಯಲ್ಲೆ ಕೆಲಸ ಎಂಬ ಇನ್ಸ್ಟಾಗ್ರಾಂ ನಂಬಿ ಮಹಿಳೆಯೋರ್ವರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ಳಾರೆ ಪೆÇಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ದಿಲ್‍ಸಾದ್ ಎಸ್ (24) ಎಂಬವರು ಜುಲೈ 9 ರಂದು ಸಂಜೆ ಮೊಬೈಲಿನಲ್ಲಿ ಇನ್ಸ್ಟಾಗ್ರಾಂ ಉಪಯೋಗಿಸುತ್ತಿರುವಾಗ ಅದರಲ್ಲಿ ವರ್ಕ್ ಆಫ್ ಹೋಂ ವಿತೌಟ್ ಇನ್ವೆಸ್ಟ್‍ಂಟ್ ಎಂದು ಲಿಂಕ್ ಇರುವ ವೀಡಿಯೋ ಬಂದಿದ್ದು, ಸದ್ರಿ ಲಿಂಕ್ ಓಪನ್ ಮಾಡಿ, ಅದರಲ್ಲಿನ ಸೂಚನೆಗಳನ್ನು ಪಾಲಿಸಿದಾಗ ಅನಿತಾ ಸಿಂಗ್ ಎಂಬ ಹೆಸರಿನ ಟೆಲಿಗ್ರಾಂ ಐಟಿ ಲಿಂಕ್ ಕಳುಹಿಸಿ ದಿಲ್ಶಾದ್ ಅವರನ್ನು ಸೇರ್ಪಡೆಗೊಳಿಸಿರುತ್ತಾರೆ. ಬಳಿಕ ಸದ್ರಿ ಅಪರಿಚಿತ ಆರೋಪಿಗಳು ವಿವಿಧ ಟಾಸ್ಕ್ ಗಳ ಹೆಸರಿನಲ್ಲಿ ಹಾಗೂ ಇತರೆ ಕಾರಣಗಳನ್ನು ಒಡ್ಡಿ ದಿಲ್ಶಾದ್ ಅವರಿಂದ ಗೂಗಲ್ ಪೇ ಮುಖಾಂತರ ಹಂತ ಹಂತವಾಗಿ ಒಟ್ಟು 2.74 ಲಕ್ಷ ರೂಪಾಯಿ ಹಣವನ್ನು ಪಾವತಿಸಿಕೊಂಡು ವಂಚನೆ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 64/2024, ಕಲಂ 318(4), 319(2) ಬಿ ಎನ್ ಎಸ್ ಮತ್ತು ಕಲಂ: 66 (ಡಿ) ಐಟಿ ಕಾಯ್ದೆ 2000 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment