ಉಪ್ಪಿನಂಗಡಿ, ಜುಲೈ 02, 2024 (ಕರಾವಳಿ ಟೈಮ್ಸ್) : ಮಕ್ಕಳಿಗೆ ಚುನಾವಣೆ ಮಹತ್ವವನ್ನು ತಿಳಿಯಲು ಮತ್ತು ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕನನ್ನು ಆಯ್ಕೆ ಮಾಡುವುದು, ಅವರಿಂದ ಶಾಲೆಯ ಸರ್ವಾಂಗೀಣ ಪ್ರಗತಿ ಮಾಡುವುದರ ಅರಿವು ಮೂಡಿಸುವ ಹಿನ್ನಲೆಯಲ್ಲಿ ವಿದ್ಯಾರ್ಥಿ ಪರಿಷತ್ ಹಾಗೂ ವಿದ್ಯಾರ್ಥಿ ನಾಯಕನ ಆಯ್ಕೆ ಪ್ರಕ್ರಿಯೆ ಸಹಕಾರಿ ಎಂದು ಉಪ್ಪಿನಂಗಡಿ ಸಮೀಪದ ವಿದ್ಯಾನಗರ-ಇಳಂತಿಲ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ರವೂಫ್ ಯು ಟಿ ಅಭಿಪ್ರಾಯಪಟ್ಟರು.
ಶಾಲಾ ವಿದ್ಯಾರ್ಥಿ ಪರಿಷತ್ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಚುನಾವಣಾ ಮಹತ್ವ ಮತ್ತು ಸಮಾಜದಲ್ಲಿ ರಾಜಕೀಯ ಮಹತ್ವ ತಿಳಿಯುವುದು ವಿದ್ಯಾರ್ಥಿಗಳ ಜೀವನದ ಪ್ರಮುಖ ಅಂಶ ಎಂದರು.
ಶಾಲಾ ಪ್ರಾಂಶುಪಾಲ ಇಬ್ರಾಹಿಂ ಖಲೀಲ್ ಹೇಂತಾರ್ ಮಾತನಾಡಿ, ಭವಿಷ್ಯದಲ್ಲಿ ಉತ್ತಮ ನಾಯಕರನ್ನು ಬೆಳೆಸಲು ಈ ಶಾಲಾ ಚುನಾವಣೆ ನಮ್ಮ ಮಕ್ಕಳಿಗೆ ಸ್ಪೂರ್ತಿ ನೀಡಲಿ ಎಂದು ಹಾರೈಸಿದರು.
ಮುಖ್ಯ ಚುನಾವಣಾಧಿಕಾರಿಯಾಗಿ ಸವಿತಾ ಕಾರ್ಯನಿರ್ವಹಿಸಿದರು. ಶಿಕ್ಷಕಿ ಫಾತಿಮ ಮಕ್ಕಳಿಗೆ ಸ್ಪೂರ್ತಿ ನೀಡಿದರು. ಸಹ ಚುನಾವಣಾಧಿಕಾರಿಗಳಾಗಿ ಉಷಾ, ನೇತ್ರಾ, ಸುಹೇರ, ಸಫ್ರಾ ಅವರು ಕಾರ್ಯನಿರ್ವಹಿಸಿದರು.
ಆರಕ್ಷಕರಾಗಿ 10ನೇ ತರಗತಿಯ ವಿದ್ಯಾರ್ಥಿಗಳಾದ ಸರ್ಫುದ್ದೀನ್ ಮತ್ತು ಮಹಮ್ಮದ್ ರಾಫಿಹ್ ಕಾರ್ಯ ನಿರ್ವಹಿಸಿದರು. ಶಾಲೆಯ 3 ರಿಂದ 10ನೇ ತರಗತಿವರೆಗಿನ ಸುಮಾರು 300 ವಿದ್ಯಾರ್ಥಿಗಳು ಮತದಾನ ಮಾಡಿದರು.
0 comments:
Post a Comment